ರಾಷ್ಟ್ರಪಿತನ ಕಡೆಗಣನೆ ಅಕ್ಷಮೀಯ: ಕೊಡಗು ಕಾಂಗ್ರೆಸ್ ಖಂಡನೆ

Dec 18, 2025 - 11:36
 0  256
ರಾಷ್ಟ್ರಪಿತನ ಕಡೆಗಣನೆ ಅಕ್ಷಮೀಯ: ಕೊಡಗು ಕಾಂಗ್ರೆಸ್ ಖಂಡನೆ

ಮಡಿಕೇರಿ:ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಕಡೆಗಣಿಸಲು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರದ ನಡೆ ಖಂಡನೀಯ ಹಾಗೂ ಅಕ್ಷಮೀಯ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಮಾಧ್ಯಮ ಪ್ರಕಟಣೆಯಲ್ಲಿ ಕಟುವಾಗಿ ಟೀಕಿಸಿದ್ದಾರೆ.

ಹಿಂದಿನ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಶತಮಾನದ ಅತ್ಯಂತ ಯಶಸ್ವಿ ಯೋಜನೆಯಾದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಿಸಲು ಮುಂದಾಗಿರುವ ಬಿಜೆಪಿಯ ನಡೆ ದೇಶದ ಸಮಗ್ರತೆಗೆ ಮಾರಕವಾಗಲಿದೆ.

ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವುದರ ಜೊತೆಗೆ ಜಗತ್ತಿಗೆ ಶಾಂತಿ ಸಂದೇಶ ನೀಡಿ ಇಡೀ ಮನುಕುಲಕ್ಕೆ ಮಾದರಿಯಾಗಿ ವಿಶ್ವದಲ್ಲೆಡೆ ಗೌರವಕ್ಕೆ ಭಾಜನರಾಗಿರುವ ಮಹಾತ್ಮ ಗಾಂಧಿ ಯವರ ಬಗ್ಗೆ ಬಿಜೆಪಿ ಯವರಿಗೆ ಇರುವ ಅಸಹನೆ,

ತಾತ್ಸಾರಗಳು ದೇಶ ದ್ರೋಹಕ್ಕೆ ಸಮಾನವಾದದ್ದು ಎಂದು ತೆನ್ನಿರ ಮೈನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭವ್ಯ ಭಾರತದ ಇತಿಹಾಸದಲ್ಲಿ ಮಹಾತ್ಮ ಗಾಂಧಿಯವರ ಹೆಸರು ಪ್ರತಿಯೊಬ್ಬ ಭಾರತೀಯನ ಉಸಿರಿನಲ್ಲಿ ಹಸಿರಾಗಿ ಇದ್ದು ಇದನ್ನು ಮರೆಮಾಚಲು ಕುತಂತ್ರಿಗಳು ಪ್ರಯತ್ನಿಸುತ್ತಿದ್ದು ಅವರ ಕುತಂತ್ರ ಎಂದಿಗೂ ಫಲಿಸುವುದಿಲ್ಲಾ ಎಂದು ತೆನ್ನಿರ ಮೈನಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0