ಪ್ರಸ್ತುತ ಸಮಾಜ ಬದಲಾಗುತ್ತಿರುವ ಕಾಲ ಘಟ್ಟದಲ್ಲಿ ಪತ್ರಿಕಾ ಮಾಧ್ಯಮಗಳು ಪ್ರಮುಖ ಪಾತ್ರವಹಿಸುತ್ತದೆ;ಪತ್ರಕರ್ತ ಸುರೇಶ್ ಚೆರಿಯಮನೆ

Mar 26, 2026 - 16:07
 0  89
ಪ್ರಸ್ತುತ ಸಮಾಜ ಬದಲಾಗುತ್ತಿರುವ ಕಾಲ ಘಟ್ಟದಲ್ಲಿ ಪತ್ರಿಕಾ ಮಾಧ್ಯಮಗಳು ಪ್ರಮುಖ ಪಾತ್ರವಹಿಸುತ್ತದೆ;ಪತ್ರಕರ್ತ ಸುರೇಶ್ ಚೆರಿಯಮನೆ

 ಶನಿವಾರಸಂತೆ:‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ್ತು ಪ್ರಸ್ತುತ ಸಮಾಜ ಬದಲಾಗುತ್ತಿರುವ ಕಾಲ ಘಟ್ಟದಲ್ಲಿ ಪತ್ರಿಕಾ ಮಾಧ್ಯಮಗಳು ಪ್ರಮುಖ ಪಾತ್ರವಹಿಸುತ್ತದೆ’ ಎಂದು ಸಂಪನ್ಮೂಲ ವ್ಯಕ್ತಿ ಪತ್ರಕರ್ತ ಸುರೇಶ್ ಚೆರಿಯಮನೆ ಅಭಿಪ್ರಾಯಪಟ್ಟರು.

ಅವರು ಶನಿವಾರಸಂತೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸ್ಥಳೀಯ ಭಾರತಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ನಡೆಯುತ್ತಿರುವ ವಾರ್ಷಿಕ ಶಿಬಿರದಲ್ಲಿ ‘ಪ್ರಸ್ತುತ ಸಮಾಜದಲ್ಲಿ ಪತ್ರಿಕಾ ಮಾಧ್ಯಮಗಳ ಪಾತ್ರ’ ಎಂಬ ವಿಷಯದ ಕುರಿತು ಬುಧವಾರ ಮಾತನಾಡಿದರು.

ಶತಮಾನಗಳ ಹಿಂದೆಯೆ ಸಮಾಜದಲ್ಲಿನ ಆಗು ಹೋಗುಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ಹಸ್ತಾಕ್ಷರದ ಪತ್ರಿಕೆ ಪ್ರಾರಂಭಗೊಳ್ಳಲು ನಾಂದಿಯಾಯ್ತು ಸಮಾಜ ಬದಲಾದಂತೆ ಪತ್ರಿಕೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೆ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ ಪ್ರಸ್ತುತ ಸಮಾಜದಲ್ಲಿ ಅಕ್ಷರ, ದೃಶ್ಯ ಮಾಧ್ಯಮ ಸಾಮಾಜಿಕ ಜಾಲತಾಣಗಳು ಸಮೂಹ ಮಾಧ್ಯಮಗಳಾಗಿ ಸ್ವರೂಪ ಪಡೆಯುತ್ತಿದೆ ಎಂದರು. ಇಂದು ಸಾಮಾಜಿಕ ಜಾಲತಾಣಗಳು ಎಐ ಅಂಥಹ ತ್ರಂತ್ರಜ್ಞಾನದ ಮೂಲಕ ಕೃತಕ ದೃಶ್ಯಗಳನ್ನು ಸೃಷ್ಟಿಸುತ್ತಿರುವುದು ಮಾಧ್ಯಮ ಕ್ಷೇತ್ರಕ್ಕೆ ಮಾರಕವಾಗಿದೆ ಇವುಗಳಿಂದ ಸಮಾಜದಲ್ಲಿ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಬೇಸರ

ವ್ಯಕ್ತ ಪಡಿಸಿದರು.

ಇಂದು ಅಕ್ಷರ ಮಾಧ್ಯಮ ಶಕ್ತಿಯುತ ಮಾಧ್ಯಮವಾಗಿದ್ದರೂ ಸಹ ಪತ್ರಿಕೆಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಈ ನಿಟ್ಟನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಜನರು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಜೆ.ಪಿ.ಕವಿತ-ವಿದ್ಯಾರ್ಥಿಗಳಲ್ಲಿ ಚೈತನ್ಯ ಹುರುಪುಗಳಿದ್ದರೆ ಉತ್ತಮ ವಿದ್ಯಾರ್ಥಿಯಾಗಿ ಹೊರ ಹೊಮ್ಮಲು ಸಾಧ್ಯವಾಗುತ್ತದೆ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಳ್ಳುವುದ್ದರಿಂದ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಾಸಗೊಳ್ಳುತ್ತದೆ ಎಂದರು.

 ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿ ಹರೀಶ್ ಕುಮಾರ್ ಮಾಗಲು ಮಾಹಿತಿ ನೀಡಿ ಇಂತಹ ಶಿಬಿರಗಳಿಂದ ಮಕ್ಕಳು ಅನೇಕ ಹೊಸ ಕಲಿಕೆಗಳನ್ನು ಕಲಿಯುತ್ತಾರೆ ಎಂದರು. ವೇದಿಕೆಯಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷ ಮದನ್ ಮಾತನಾಡಿ ಇಂದು ಸಾಮಾಜಿಕಜಾಲ ಎಷ್ಟು ಉಪಯುಕ್ತ ಅಷ್ಟೇ ಮಾರಕವಾಗಿದೆ ನಾವು ಮೊಬೈಲ್ ಗಳನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂದರು.

ಸದಸ್ಯರಾದ ಶಶಿಕಲಾ ಮಾತನಾಡಿ ಮಕ್ಕಳು ಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು ಎಂದರು. ಉಪನ್ಯಾಸಕ ಡಿ .ಇ.ಸುರೇಂದ್ರ ಮಾತನಾಡಿ ಇಂದು ಮಾತನಾಡಿ ಮನೆಗಳಲ್ಲಿ ಇಂದು ಮನಸ್ತಾಪ ಬರುತ್ತಿರುವುದು ಮನೆಯ ಟಿ ವಿ ಗಳಿಂದ ಗಂಡನಿಗೆ ಒಂದು, ಮಕ್ಕಳಿಗೆ ಒಂದು ಚಾನಲ್ ಪತ್ನಿಗೆ ಒಂದು ಚಾನಲ್ ವೀಕ್ಷಣೆ ಮಾಡಲು ಟಿ ವಿ ಬೇಕು ಆದರೆ ಇರುವುದು ಒಂದೇ ಟಿ ವಿ ಇದು ಮನೆಯ ಮನಸ್ತಾಪಕ್ಕೆ ಕಾರಣವಾಗುತ್ತಿದೆ ಎಂದರು. ಎಸ್ ಡಿ ಎಂ ಸಿ ಸದಸ್ಯೆ ಅಶ್ವಿತ, ಉಪನ್ಯಾಸಕ ಬಿ.ಎಂ.ಪೊನ್ನಪ್ಪ, ಪತ್ರಕರ್ತ ದಿನೇಶ್ ಮಾಲಂಬಿ ಮುಂತಾದವರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0