ನಾಪೋಕ್ಲು ನಾಡಕಛೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ವರದಿ :ಝಕರಿಯ
ನಾಪೋಕ್ಲು :ನಾಪೋಕ್ಲುವಿನ ನಾಡಕಛೇರಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಛೇರಿಯ ಆವರಣದಲ್ಲಿ ಕಂದಾಯ ಪರಿವೀಕ್ಷಕ ರವಿಕುಮಾರ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಗ್ರಾಮ ಆಡಳಿತ ಅಧಿಕಾರಿಗಳಾದ ಅಮೃತ, ಸ್ವಾತಿ, ದಾನೇಶ್ವರಿ, ಲೇಖನ,ರವಿಚಂದ್ರ, ಶರ್ಮಿಳಾ ಸಿಬ್ಬಂದಿಗಳಾದ ತಿಮ್ಮಣ್ಣ, ಸೋಮಯ್ಯ, ರಾಜ, ಪೂಣಚ್ಚ, ಕುಶಾಲಪ್ಪ, ಲಾಲು, ಸಂಜಯ್,ಪ್ರಸಾದ್, ಪ್ರದೀಪ್, ನೌಶಾದ್ ಹಾಜರಿದ್ದರು.