ಪೆರುಂಬಾಡಿ ಎಸ್.ಇ.ಎ ಮಹಿಳಾ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನದ ಸಂಭ್ರಮ
ವಿರಾಜಪೇಟೆ : ಪೆರುಂಬಾಡಿ ಎಸ್ಇಎ ಮಹಿಳಾ ಕಾಲೇಜಿನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಸ್ಥೆಯ ಸಂಚಾಲಕರಾದ ಬಶೀರ್ ಹಾಜಿ ಧ್ವಜಾರೋಹಣವನ್ನು ನೆರವೇರಿಸುವುದರ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಭಾನುಮತಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹನೀಯರ ತ್ಯಾಗ ಬಲಿದಾನಗಳನ್ನು ಸ್ಮರಿಸಿದರು. ಮತ್ತು ನೂರನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲು ಸರ್ಕಾರ "ವಿಕಸಿತ ಭಾರತ @2047" ಎಂಬ ದೃಷ್ಟಿಕೋನವನ್ನು ಹೊಂದಿದೆ.ಇದರ ಅಡಿಯಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಆರ್ಥಿಕ ಬೆಳವಣಿಗೆ, ಸಾಮಾಜಿಕ ಪ್ರಗತಿ, ಪರಿಸರ ಸುಸ್ಥಿರತೆ ಮತ್ತು ಉತ್ತಮ ಆಡಳಿತವನ್ನು ಒಳಗೊಂಡಿದೆ. ಇದರ ಯಶಸ್ವಿಗೆ ವಿದ್ಯಾರ್ಥಿಗಳು ಶ್ರಮ ವಹಿಸಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕರಾದ ಬಶೀರ್ ಹಾಜಿ, ಸದಸ್ಯರಾದ ಎಡಪಾಲ ಬಶೀರ್ ಅಹಮದ್ , ಇಸ್ಮಾಯಿಲ್ ಮುಸ್ಲಿಯಾರ್ ಪ್ರಾಂಶುಪಾಲರಾದ ಭಾನುಮತಿ, ಉಪನ್ಯಾಸಕರು, ಶಿಕ್ಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮನರಂಜಿಸಿದರು. ವರದಿ:ನೌಫಲ್