ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದವರು, ಸಮಾಜದ ಏಳಿಗೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ: ಶಾಸಕ ಎಎಸ್ ಪೊನ್ನಣ್ಣ
ಪೊನ್ನಂಪೇಟೆ: ತಾಲೂಕಿನ ಟಿ.ಶೆಟ್ಟಿಗೇರಿಯ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.
ಟಿ ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದವರು, ಸಮಾಜದ ಏಳಿಗೆಗೆ ಹಲವಾರು ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿರುವುದು ಹಾಗೂ ಸಮಾಜಕ್ಕೆ ಬೇಕಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂದಿರುವುದು ಒಳ್ಳೆಯ ನಡೆ. ಸಮಾಜದ ಸಂಸ್ಕೃತಿ ಪರಂಪರೆ ಹಾಗೂ ಇತಿಹಾಸವನ್ನು ಇಂತಹ ಸಮಾಜಗಳು ಉಳಿಸಿ ಬೆಳೆಸುವ ಮಹತ್ತರವಾದ ಜವಾಬ್ದಾರಿಯನ್ನು ಹೊತ್ತುಕೊಂಡಿರುವುದು ಶುಭ ಲಕ್ಷಣ. ಮುಂದೆಯೂ ಸಮಾಜದವರು ನಾಡಿಗೆ ಹಾಗೂ ಜನಾಂಗಕ್ಕೆ ಬೇಕಾದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲ್ಲರಿಗೂ ಮಾದರಿಯಾಗಬೇಕೆಂದು ಕರೆ ನೀಡಿದರು.
ಯಾವುದೇ ರೀತಿಯಾದ ಸಹಾಯ ಬೇಕಿದ್ದಲ್ಲಿ ತನ್ನನ್ನು ಯಾವ ಸಂದರ್ಭದಲ್ಲಿ ಸಹ ಸಂಪರ್ಕಿಸಬಹುದು ಎಂಬ ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಾವಳಗೇರಿ ಟಿ.ಶೆಟ್ಟಿಗೇರಿ ಮೂಂದ್‌ನಾಡ್ ಕೊಡವ ಸಮಾಜದ ಅಧ್ಯಕ್ಷರಾದ ಶ್ರೀ ಕೈಬಿಲೀರ ಹರೀಶ್ ಅಪ್ಪಯ್ಯ, ಅಪುಟ್ಟ, ಬೋಸ್ ವಿಶ್ವನಾಥ್, ದಾನಿಗಳದ ಅಜ್ಜಮಾಡ ಡಾಲಿ ತಿಮಯ್ಯ, ನಿರ್ದೇಶಕರಾದ ಮುಕಟೀರ ಸಂದೀಪ್, ರವಿ ಸುಬ್ಬಯ್ಯ, ಮಚ್ಚಮಾಡ ಸುಮಂತ್, ತಡಿಯಂಗಡ ಸೌಮ್ಯ, ರೇಷ್ಮ, ಉದಯ್, ಮೋಟಯ್ಯ, ವಿಶು ಹಾಗೂ ಪ್ರಮುಖರು ಉಪಸ್ಥಿತರಿದ್ದರು.