ಸಾಹಿತ್ಯ ಅಕಾಡಮಿಗಳು ಪುಸ್ತಕ ರಚನೆ ಮಾಡಿದರೆ ಸಾಲದು,ನಮ್ಮ ಸಂಸ್ಕೃತಿ , ಪದ್ದತಿ,ಪರಂಪರೆಗಳ ಅನುಪಾಲನೆಯತ್ತ ಹೆಚ್ಚಿನ ಗಮನ ಹರಿಸಬೇಕು: ಶಾಸಕ‌ ಎ.ಎಸ್ ಪೊನ್ನಣ್ಣ

ಸಾಹಿತ್ಯ ಅಕಾಡಮಿಗಳು ಪುಸ್ತಕ ರಚನೆ ಮಾಡಿದರೆ ಸಾಲದು,ನಮ್ಮ ಸಂಸ್ಕೃತಿ , ಪದ್ದತಿ,ಪರಂಪರೆಗಳ ಅನುಪಾಲನೆಯತ್ತ ಹೆಚ್ಚಿನ ಗಮನ ಹರಿಸಬೇಕು: ಶಾಸಕ‌ ಎ.ಎಸ್ ಪೊನ್ನಣ್ಣ

ಮಡಿಕೇರಿ :ಸಾಹಿತ್ಯ ಅಕಾಡಮಿಗಳು ಪುಸ್ತಕ ರಚನೆ ಮಾಡಿದರೆ ಸಾಲದು.ನಮ್ಮ ಸಂಸ್ಕೃತಿ , ಪದ್ದತಿ,ಪರಂಪರೆಗಳ ಅನುಪಾಲನೆಯತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನವರು ಕೊಡವ ಸಾಹಿತ್ಯ ಅಕಾಡೆಮಿ ಪಧಾಧಿಕಾರಿಗಳಿಗೆ ಕಿವಿ ಮಾತು ಹೇಳಿದ್ದಾರೆ.

ನಾಪೋಕ್ಲು ವಿನ ಬಿದ್ದಾಟಂಡ ಕುಟುಂಬಸ್ಥರ ಗದ್ದೆಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ,ನಾಲ್ ನಾಡ್ ಪ್ಲಾಂಟರ್ಸ ಕ್ಲಬ್ ಸಹಯೋಗದಲ್ಲಿ ನಡೆದ ಅಯಿಪಣಿ ಕೊಯಿಮೆ ನಮ್ಮೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ನಮ್ಮ ಪೂರ್ವಜರು ನಮಗಾಗಿ ಬಿಟ್ಟು ಹೋದ ಆಚರಣೆಗಳನ್ನು ಪಾಲಿಸುವುದು ನಮ್ಮೆಲ್ಲರ ಮೂಲಭೂತ ಕರ್ತವ್ಯ.ಅವುಗಳನ್ನು ಮುಂದಿನ ಪೀಳಿಗೆಯವರು ಅನುಸರಿಸಿಕೊಂಡು ಹೋಗುವ ವಾತಾವರಣವನ್ನು ಅಕಾಡಮಿ ಸೇರಿದಂತೆ ಸಂಘ ಸಂಸ್ಥೆಗಳು ನಿರ್ಮಾಣ ಮಾಡಬೇಕು ಎಂದು ಅವರು ಹೇಳಿದರು.

ಪೊನ್ನಣ್ಣ ನವರ ಸಹೋದರನ ಮದುವೆಗೆ ಎ.ಕೆ.ಸುಬ್ಬಯ್ಯ ನವರ ಆಮಂತ್ರಣ ದ ಮೇರೆಗೆ ಅಂದಿನ ಕೇಂದ್ರ ಸಚಿವರಾದ ಜಯಪಾಲ್ ರೆಡ್ಡಿ ಯವರು ಭಾಗವಹಿಸಿ ನಂತರ ಪತ್ರ ಬರೆದು ನನ್ನ ಜೀವ ಮಾನದಲ್ಲಿಯೇ ಇಂತಹ ಅಧ್ಬುತ ಸಂಸ್ಕಾರ ಹೊಂದಿದ ಆಚರಣೆಯನ್ನು ನೋಡಿರಲಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ಸ್ಮರಿಸಿದ ಪೊನ್ನಣ್ಣ ನವರು ನಮ್ಮ ಆಚರಣೆಯನ್ನು ಜಗತ್ತಿನ ಪ್ರತಿಯೊಬ್ಬರು ಗೌರವಿಸುವಾಗ ನಾವು ನಮ್ಮ ಆಚರಣೆಯ ಬಗ್ಗೆ ತಾತ್ಸಾರ ಹೊಂದ ಬಾರದು ಎಂದು ಹೇಳಿದರು. ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ ,ಅಕಾಡಮಿ ಸದಸ್ಯರು,ಪ್ಲಾಂಟರ್ಸ್ ಕ್ಲಬ್ ಸದಸ್ಯರು,ಅಕಾಡಮಿ ಮಾಜಿ ಅಧ್ಯಕ್ಷರಾದ ಬಿದ್ದಾಟಂಡ ತಮ್ಮಯ್ಯ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ, ಬೊಳ್ಳಚೆಟ್ಟಿರ ಸುರೇಶ್ ಸೇರಿದಂತೆ ಸ್ಪರ್ಧಾಳುಗಳು ,ನಾಗರೀಕರು ಉಪಸ್ಥಿತರಿದ್ದರು.