ಖಾಸಗಿ ಬಸ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷರಾಗಿ ಕುಶಾಲನಗರದ ಜನಾರ್ಧನ ಪ್ರಭು ಆಯ್ಕೆ
admincoorgdaily

ಮಡಿಕೇರಿ; ಕುಶಾಲನಗರದ ಶ್ರೀ ಗುರುರಾಘವೇಂದ್ರ ಬಸ್ ಗಳ ಮಾಲೀಕರಾದ ಜನಾರ್ಧನ್ ಪ್ರಭು ಅವರು ಕೊಡಗು ಜಿಲ್ಲೆಯ ಖಾಸಗಿ ಬಸ್ ಮಾಲೀಕರ ಅಸೋಸಿಯೇಷನ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅಸೋಸಿಯೇಷನ್ ಉಪಾಧ್ಯಕ್ಷರಾಗಿ ಕೆ.ಡಬ್ಲ್ಯೂ. ಪೂಣಚ್ಚ, ಖಜಾಂಚಿಯಾಗಿ ವಾಲ್ನೂರಿನ ಎಂ. ಜಯಂತ್, ಕಾರ್ಯದರ್ಶಿಯಾಗಿ ಸುಬ್ರಮಣ್ಯ ಕಿಣಿ ಹಾಗೂ ನಿರ್ದೇಶಕರಾಗಿ ಗೌತಂ ಭೋಜಣ್ಣ, ದಿಲನ್ ಚೆಂಗಪ್ಪ, ಕೆ.ಪಿ.ಜನಾರ್ದನ, ಡಿ.ಟಿ.ರಾಜೇಶ್, ಕೌಶಿಕ್ ಕಾವೇರಪ್ಪ, ನಯನ ಕುಮಾರ್, ದರ್ಶನ್, ಕೆ.ಎಸ್.ಧನಂಜಯ, ಕಾಡೀರ ಉಮೇಶ್, ಗಣೇಶ್ ಹಾಗೂ ನೀಲಣ್ಣ ಆಯ್ಕೆಯಾಗಿದ್ದಾರೆ ಎಂದು ಕಾರ್ಯದರ್ಶಿ ಸುಬ್ರಮಣ್ಯ ತಿಳಿಸಿದ್ದಾರೆ.