ಕೊಡಗು ಜಿಲ್ಲಾ ಹಿಂದುಳಿದ ಒಕ್ಕಲಿಗರ ಅಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಕೆ.ಎಸ್ ಗೋಪಾಲಕೃಷ್ಣ ನೇಮಕ
admincoorgdaily

ಮಡಿಕೇರಿ: ಕೊಡಗು ಜಿಲ್ಲಾ ಹಿಂದುಳಿದ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಕೆ.ಎಸ್ ಗೋಪಾಲಕೃಷ್ಣ ಅವರನ್ನು ನೇಮಿಸಿ,ರಾಜ್ಯಾಧ್ಯಕ್ಷರಾದ ಹೆಚ್.ಪಿ ಸೋಮಶೇಖರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ರಾಜ್ಯಾಧ್ಯಕ್ಷರಾದ ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆ.ಎಸ್ ಗೋಪಾಲಕೃಷ್ಣ ಅವರನ್ನು ನೇಮಕ ಮಾಡಲಾಗಿದ್ದು,ಕೊಡಗು ಜಿಲ್ಲೆಯ ಸಂಪೂರ್ಣ ಹಿಂದುಳಿದ ಬಡ ಒಕ್ಕಲಿಗರನ್ನು ರಕ್ಷಿಸಲು ಮತ್ತು ಸರ್ಕಾರದ ಎಲ್ಲಾ ಸವಲತ್ತುಗಳನ್ನು ಒದಗಿಸಲು ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಕೆ.ಎಸ್ ಗೋಪಾಲಕೃಷ್ಣ ಅವರಿಗೆ ನಿರ್ದೇಶನ ನೀಡಲಾಗಿದೆ.