ಪ್ರತಿಯೊಬ್ಬ ಆಟಗಾರರ ಸಾಮರ್ಥ್ಯವನ್ನು ಪ್ರದರ್ಶಿಸಲು ಕಬಡ್ಡಿ ಉತ್ತಮ‌ ಕ್ರೀಡೆ: ಶಾಸಕ ಎಎಸ್ ಪೊನ್ನಣ್ಣ

ಪ್ರತಿಯೊಬ್ಬ ಆಟಗಾರರ ಸಾಮರ್ಥ್ಯವನ್ನು ಪ್ರದರ್ಶಿಸಲು ಕಬಡ್ಡಿ ಉತ್ತಮ‌ ಕ್ರೀಡೆ: ಶಾಸಕ ಎಎಸ್ ಪೊನ್ನಣ್ಣ

ಗೋಣಿಕೊಪ್ಪ:ಶಿವಾಜಿ ಯುವ ಸೇನೆ ಗೋಣಿಕೊಪ್ಪ ಆಯೋಜಿಸಿದ, ಹೊನಲು ಬೆಳಕಿನ ಜಿಲ್ಲಾಮಟ್ಟದ ಪ್ರೊ ಕಬಡ್ಡಿ ಮಾದರಿಯ ಪಂದ್ಯಾಟದಲ್ಲಿ ಅತಿಥಿಯಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.

ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಇತ್ತೀಚಿನ ದಿನಗಳಲ್ಲಿ ಕಬ್ಬಡಿ ಪಂದ್ಯಾಟವು ಯೋಜನೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಮೂಡಿಸಿದೆ. ಅತ್ಯಂತ ಚಾಕಚಕ್ಯತೆಯಿಂದ ಹಾಗೂ ಬುದ್ಧಿವಂತಿಕೆಯಿಂದ ಈ ಆಟವನ್ನು ಆಡಬೇಕಾಗಿರುವುದರಿಂದ ಇದು ಪ್ರತಿಯೊಬ್ಬ ಆಟಗಾರರ ಸಾಮರ್ಥ್ಯವನ್ನು ಪ್ರದರ್ಶಿಸಲು ಉತ್ತಮ ಕ್ರೀಡೆಯಾಗಿದೆ. ಭಾರತದ ಪುರಾತನ ಕ್ರೀಡೆಗಳಲ್ಲಿ ಒಂದಾಗಿರುವ ಕಬ್ಬಡಿ ಆಟವು ಇಂದು ವಿಶ್ವಾದ್ಯಂತ ಆಡುತ್ತಿರುವುದು ನಾಡಿಗೆ ಹಾಗೂ ದೇಶಕ್ಕೆ ಹೆಮ್ಮೆಯ ವಿಷಯ ಎಂದು ಬಣ್ಣಿಸಿದರು.

ಪಂದ್ಯಾಟದಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಶುಭ ಕೋರಿದ ಶಾಸಕರು, ಕ್ರೀಡೆಯನ್ನು ಎಲ್ಲರೂ ಕ್ರೀಡಾ ಮನೋಭಾವದಿಂದ ಆಸ್ವಾದಿಸಬೇಕೆಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಉಪಸ್ಥಿತರಿರುವ ಎಲ್ಲಾ ಗಣ್ಯರು, ಗೋಣಿಕೊಪ್ಪ ಪಂಚಾಯಿತಿ ಅಧ್ಯಕ್ಷರು ಕುಲಚಂಡ ಪ್ರಮೋದ್ ಗಣಪತಿ, ಪಂಚಾಯಿತಿ ಸದಸ್ಯರು ಶರತ್, ಚೀಫ್ ಎಲೆಟ್ರಿಕಲ್ ಆಫೀಸರ್ ರೋಷನ್ ಅಪ್ಪಚ್ಚು, ಶಿವಾಜಿ ಯುವ ಸೇನೆ ಅಧ್ಯಕ್ಷರು ಅಣ್ಣಪ್ಪ, ಅರುವತೊಕ್ಲು ಪಂಚಾಯಿತಿ ಸದಸ್ಯರಾದ ಅಜ್ಜಿಕುಟ್ಟಿರ ಸಜನ್ ಚಂಗಪ್ಪ , ಡಾಕ್ಟರ್ ಅಮೃತ ನಾಣಯ್ಯ, ಮಾನಸ ತಿಮ್ಮಯ್ಯ, ಕೊಲ್ಲಿರ ದಯಾ ಕಾವೇರಪ್ಪ, ಪೊನಂಪೇಟೆ ಯುವ ಕಾಂಗ್ರೆಸ್ ಅಧ್ಯಕ್ಷರು ಧ್ಯಾನ್, ಶಾಜಿ ಅಚ್ಚುತನ್, ನಾಯಂದಿರ ಶಿವಾಜಿ, ನೊರೆರ ಧನ್ಯ ಕ್ರೀಡಾ ಪ್ರೇಮಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.