ಕಂದಮ್ಮನ ಕಣ್ಣಿನ ಗಂಭೀರ ಆರೋಗ್ಯ ಸಮಸ್ಯೆ:ಹೆಚ್ಚಿನ ಚಿಕಿತ್ಸೆಗೆ ನೆರವಿನ ಭರವಸೆ ನೀಡಿದ ಶಾಸಕ ಪೊನ್ನಣ್ಣ
ವಿರಾಜಪೇಟೆ;ತಿತಿಮತಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ನವೀನ್ ರವರ ಮೂಲಕ ಮಾನ್ಯ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರನ್ನು ಭೇಟಿಯಾದ ಸ್ಥಳೀಯ ತಾರ ಎಂಬುವರ ತಮ್ಮ ಕಂದಮ್ಮನ ಕಣ್ಣಿನ ಗಂಭೀರ ಆರೋಗ್ಯ ಸಮಸ್ಯೆಯ ಬಗ್ಗೆ ಶಾಸಕರಲ್ಲಿ ತಮ್ಮ ಅಳಲನ್ನು ತೋಡಿಕೊಂಡರು. ಬಳಿಕ ಶಾಸಕರು ಕಂದಮ್ಮನ ಹೆಚ್ಚಿನ ಚಿಕಿತ್ಸೆಗೆ ನೆರವು ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಮೀದೇರಿರ ನವೀನ್, ತಾಲೂಕು ಪ್ರಚಾರ ಸಮಿತಿಯ ಅಧ್ಯಕ್ಷರು ಟಾಟು ಮೊಣ್ಣಪ್ಪ, ಗೋಣಿಕೊಪ್ಪ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಉಪಾಧ್ಯಕ್ಷ ಪಂಕಜ, ಪ್ರಮುಖರು ಸೂರಜ್ ಹೊಸೂರು, ಬಾಚಮಾಂಡ ಲವ ಚಿಣ್ಣಪ್ಪ, ವಿನಯ್ ಕುಮಾರ್, ಅಂಕಿತ್ ಪೊನ್ನಪ್ಪ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
