ಕೊಡಗಿನ ಸಿ& ಡಿ ಜಾಗದ ಸಮಸ್ಯೆ: ಅನುಪಾಲನಾ ವರದಿ ನೀಡಲು ಸಮಿತಿ ರಚನೆ ಮಾಡಿದ ರಾಜ್ಯ ಸರ್ಕಾರ
ಮಡಿಕೇರಿ:ಕೊಡಗು ಜಿಲ್ಲೆಯ ಕಂದಾಯ ಇಲಾಖೆ, ಸರ್ಕಾರದ ಹೆಸರಿನಲ್ಲಿರುವ ಪೈಸಾರಿ ಜಮೀನನ್ನು ಸಿ ಮತ್ತು ಡಿ ಜಮೀನೆಂದು ವರ್ಗೀಕರಿಸಿ ಅರಣ್ಯ ಇಲಾಖೆಗೆ ವರ್ಗಾವಣೆಯ ಸಂಬಂಧ ಅರಣ್ಯ ಇಲಾಖೆ & ಕಂದಾಯ ಇಲಾಖೆ ನಡುವಿನ ಸಮಸ್ಯೆಗಳು, ವಸ್ತುಸ್ಥಿತಿ ವಿವರಗಳ ಕುರಿತು ಅಧ್ಯಯನ ನಡೆಸಿ, ಸಮಸ್ಯೆಗಳನ್ನು ಬಗೆಹರಿಸುವ ಸಲಹಾತ್ಮಕ ಅಂಶಗಳೊಂದಿಗೆ ವರದಿ ನೀಡಲು ಕೊಡಗು ಜಿಲ್ಲೆಯನ್ನು ಪ್ರಾಯೋಗಿಕವಾಗಿ ಆಯ್ಕೆಮಾಡಿದ್ದು, ಅಧಿಕಾರೇತರ ಸದಸ್ಯರ ಆರ್ಥಿಕ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯ ಸಹಮತಿ ಪಡೆಯುವ ಷರತ್ತಿಕೊಳಪಟ್ಟು, ಈ ಸಮಿತಿಯನ್ನು ರಚಿಸಿ ಆದೇಶಿಸಿದೆ.
1. ಪ್ರಭಾಕರ ಕೆ.ಎಸ್. (ನಿವೃತ್ತ ಐ.ಎ.ಎಸ್) ಅಧ್ಯಕ್ಷರು 2. ಭಾನುಪ್ರಕಾಶ್ (ಹೆಚ್ಚುವರಿ ಅಡ್ವಕೇಟ್ ಜನರಲ್ ಸದಸ್ಯರು 3. ಪೂವಯ್ಯ (ನಿವೃತ್ತ ಡಿ.ಸಿ.ಎಫ್.) ಸದಸ್ಯರು 4. ಜಯರಾಮ್ (ನಿವೃತ್ತ ತಹಶೀಲ್ದಾರ್) ಸದಸ್ಯರು ಈ ಸಮಿತಿಯು, ಕೊಡಗು ಜಿಲ್ಲೆಯ ಸಿ ಮತ್ತು ಡಿ ಜಮೀನುಗಳ ಕುರಿತಂತೆ ಇರುವ ಸಮಸ್ಯೆ & ವಸ್ತುಸ್ಥಿತಿಗಳನ್ನು ವಿವರವಾಗಿ ಅಭ್ಯಸಿಸಿ ಇಲಾಖೆಗಳ ನಡುವಿನ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ, ಬಗೆಹರಿಸುವ ಸಲಹಾತ್ಮಕ ಅಂಶಗಳೊಂದಿಗೆ ಅನುಪಾಲನಾ ವರದಿಯನ್ನು 6 ತಿಂಗಳೊಳಗಾಗಿ ಸಲ್ಲಿಸುವಂತೆ ಸರಕಾರಿ ಆದೇಶದಲ್ಲಿ ತಿಳಿಸಲಾಗಿದೆ. ಅನುಪಾಲನಾ ವರದಿ ನೀಡಲು ಸಮಿತಿಗೆ 6 ತಿಂಗಳ ಕಾಲಾವಧಿ ನಿಗದಿ ಪಡಿಸಲಾಗಿದೆ.