ಕೊಡಗಿನ ಶಕ್ತಿ ಪತ್ರಿಕೆಗೆ ರಾಜ್ಯ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಅತ್ಯುತ್ತಮ ಉದ್ಯಮಕ್ಕಾಗಿನ ಪ್ರಶಸ್ತಿ
admincoorgdaily

ಮಡಿಕೇರಿ; ಕೊಡಗಿನ ಶಕ್ತಿ ಪತ್ರಿಕೆಗೆ ರಾಜ್ಯ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಅತ್ಯುತ್ತಮ ಉದ್ಯಮಕ್ಕಾಗಿನ ಪ್ರಶಸ್ತಿ ತುಮಕೂರಿನಲ್ಲಿ ಆಯೋಜಿತ ರಾಜ್ಯ ಚೇಂಬರ್ ಆಫ್ ಕಾಮರ್ಸ್ ಸಮ್ಮೇಳನದಲ್ಲಿ ಪ್ರಧಾನ ಮಾಡಲಾಗಿದೆ.
ಪ್ರಶಸ್ತಿಯನ್ನು ಶಕ್ತಿ ಸಂಪಾದಕ ಜಿ. ಚಿದ್ವಿಲಾಸ್ ಅವರು ಸ್ವೀಕರಿಸಿದರು. ಈ ಸಂಧರ್ಭ ಕೊಡಗು ಜಿಲ್ಲಾ ಚೇಂಬರ್ ಅಧ್ಯಕ್ಷ ಬಿ. ಆರ್. ನಾಗೇಂದ್ರ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಅಂಬೇಕಲ್ ನವೀನ್, ರಾಜ್ಯ ಚೇಂಬರ್ ನಿರ್ದೇಶಕ ಗಿರೀಶ್ ಗಣಪತಿ, ಮಡಿಕೇರಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸಂತೋಷ್ ಅನ್ವೆಕರ್, ಜಿಲ್ಲಾ ನಿರ್ದೇಶಕರಾದ ಕೊಡ್ಲಿಪೇಟೆಯ ದಿನೇಶ್, ಯತೀಶ್ ಹಾಜರಿದ್ದರು.