ಕೇದಾರನಾಥ ಪ್ರವಾಸಕ್ಕೆ ತೆರಳಿದ್ದ ಕೊಡಗಿನ ಶಿಕ್ಷಕಿ ಸಾವು
admincoorgdaily

ಮಡಿಕೇರಿ; ಸಹಪಾಠಿಗಳೊಂದಿಗೆ ಸೋಮವಾರ ದಿನ ವಿರಾಜಪೇಟೆಯಿಂದ ಭದ್ರಿನಾಥ್,ಕೇದಾರನಾಥ ದೇವಾಲಯಕ್ಕೆ ಪ್ರವಾಸಕ್ಕೆ ತೆರಳಿದ್ದ, ವಿರಾಜಪೇಟೆ ವಿಜಯನಗರದ ನಿವಾಸಿ ದಿ.ವಾಮನ ಅವರ ಪತ್ನಿ ಭವಾನಿ ಎಚ್. ಎಂ. (60) ಇಂದು ಪ್ರಯೋಗ್ರಾಜ್ ಎಂಬಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಹಾಲುಗುಂದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದು, ಕಳೆದ ಹತ್ತು ದಿನಗಳ ಹಿಂದಷ್ಟೇ ನಿವೃತ್ತಿಯಾಗಿದ್ದರು.ಕೇದಾರನಾಥ ಸ್ಥಳಕ್ಕೆ ಕುಟುಂಬಸ್ಥರು ತೆರಳಿದ್ದು,ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.