ಕೊಡವ ಅಭಿವೃದ್ಧಿ ನಿಗಮ , ಅತ್ಯಂತ ಶ್ರೇಷ್ಠ ಕೊಡುಗೆ;ಮಂಜು ಚಿಣ್ಣಪ್ಪ ಅಭಿಮತ
ಮಡಿಕೇರಿ;ಕೊಡವ ಅಭಿವೃದ್ಧಿ ನಿಗಮ ಶಾಸಕ ಎ. ಎಸ್. ಪೊನ್ನಣ್ಣನವರಿಂದಾಗಿ ಕೊಡವರಿಗೆ ದೊರಕಿದ ಶ್ರೇಷ್ಠ ಕೊಡುಗೆಯಾಗಿದ್ದು, ಇದು ಯುನೈಟೆಡ್ ಕೊಡವ ಆರ್ಗನೈಸೇಷನ್ - ಯುಕೊ ಸಂಘಟನೆಯ ಪರಿಕಲ್ಪನೆ ಹಾಗು ಹೊರಾಟಕ್ಕೆ ಸಿಕ್ಕ ಪ್ರತಿಫಲವಾಗಿದೆ, ಕೊಡವರು ಇದನ್ನು ಸಮಗ್ರವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಚಿಂತಿಸಬೇಕು ಎಂದು ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಹೇಳಿದರು.
ಅರೆಕಾಡು- ಹೊಸ್ಕೇರಿ ಗ್ರಾಮದಲ್ಲಿ ಕೊಡವ ವೆಲ್’ಫೇರ್ ಮತ್ತು ರಿಕ್ರಿಯೇಶನ್ ಅಸೋಸಿಯೇಷನ್ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ‘ಕೊಡವ ಭವನ’ದಲ್ಲಿ KWRA ಅದ್ಯಕ್ಷರಾದ ಕುಕ್ಕೇರ ಜಯ ಚಿಣ್ಣಪ್ಪ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಚಿಂತನಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಕೊಡವರ ಸಮಗ್ರ ಅಭಿವೃದ್ಧಿಯ ಹಿತದೃಷ್ಠಿಯಿಂದ ನೂತನವಾಗಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಸರ್ಕಾರಕ್ಕೆ ಬೇಡಿಕೆಯನ್ನಿಟ್ಟು ಕಳೆದ ಒಂದು ದಶಕದಿಂದ ಪ್ಯವಸ್ಥಿತವಾಗಿ ಹೋರಾಟ ನಡೆಸುತ್ತಾ ಬರಲಾಗಿತ್ತು. ಇದೀಗ ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣನವರಿಗೆ ಕೊಡವರ ಮೇಲಿರುವ ಕಾಳಜಿ ಹಾಗು ಸರ್ಕಾರದಲ್ಲಿ ಅವರಿಗಿರುವ ಪ್ರಭಾವದಿಂದಾಗಿ ಮುಖ್ಯಮಂತ್ರಿಗಳು ಬಜೆಟಿನಲ್ಲಿ ಕೊಡವರಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಘೋಷಿಸುವಂತಾಗಿದೆ, ಇದನ್ನು ಕೊಡವರು ಸದಾ ಮನಸಿನಲ್ಲಿಟ್ಟುಕೊಳ್ಳಬೇಕಾಗಿದೆಯೆಂದು ಹೇಳಿದರು.
ಮುಂದುವರಿದು ಮಾತನಾಡಿದ ಅವರು, ಜಗತ್ತು ಕೊಡವರು ವಿಶಿಷ್ಟ ಜನಾಂಗವೆಂಬ ಬಿರುದನ್ನ ನೀಡಿದ್ದು, ಇದನ್ನು ಪ್ರತಯೊಬ್ಬ ಕೊಡವರೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ ಕೊಡವರು ತಮ್ಮ ನೆಲ ಜಲ. ಭಾಷೆ, ಪರಂಪರೆ ಹಾಗು ಸಂಸ್ಕೃತಿಯೆಡೆಗೆ ನಿರ್ಲಕ್ಷವಹಿಸಿದರೆ ಕೊಡವರ ವೈಶಿಷ್ಟ್ಯತೆ ಉಳಿಯಲು ಸಾಧ್ಯವಿಲ್ಲ. ಕೇವಲ ತೋರಿಕೆಯ ಕೊಡವಾಮೆಯಿಂದ ಯಾವುದೇ ಪ್ರಯೋಜನ ವಿಲ್ಲ. ಕೊಡವಾಮೆಯ ಸಮಗ್ರತೆಯೊಂದಿಗೆ ಜೀವಿಸಬೇಕು ಹಾಗಿದ್ದಾಗ ಮಾತ್ರವೇ ಕೊಡವಾಮೆಯ ಮಹತ್ವ ಹಾಗು ವೈಶಿಷ್ಟ್ಯತೆ ಅನುಭವಕ್ಕೆ ಬರಲು ಸಾಧ್ಯ. ನಿಟ್ಟಿನಲ್ಲಿ ಇಂದಿನ ಹಿರಿಯರು ಮುಂದಿನ ಪೀಳಿಗೆಗೆ ಮೇಲ್ಪಂಕ್ತಿಯನ್ನು ಹಾಕಿಕೊಡುವ ಅನಿವಾರ್ಯತೆ ಇದೆ ಎಂದು ಅವರು ಪ್ರತಿಪಾದಿಸಿದರು.
ಕೊಡವರ ಹೆಸರಿನಲ್ಲಿ ನಡೆಯುವ ಹೋರಾಟಗಳು ಡಂಬಾಚಾರಿಕೆಯಿಂದ ಕೂಡಿರಬಾರದು, ಸೂಕ್ಮಾತಿಸೂಕ್ಷ್ಮ ಅಲ್ಪಸಂಖ್ಯಾತ ಕೊಡವರಲ್ಲಿ ಬಹುಪಾಲು ಮುಗ್ದತೆಯಿದೆ, ಇದರಿಂದಾಗಿ ಕೊಡವರನ್ನು ವಂಚಿಸುವುದು ಸುಲಭ ಆದರೆ ಕೊಡವ ಎಂಬ ತಲೆಬರಹವನ್ನು ಇಟ್ಟುಕೊಂಡು ಕೊಡವರನ್ನು ವಂಚಿಸುವ ಪ್ರಯತ್ನಗಳು ಇತಿಹಾಸದಿಂದಲೂ ನಿರಂತರ ನಡೆಯುತ್ತಾ ಬಂದಿದೆ, ಆದರೆ ಅಂತಹ ದುಷ್ಟ ಶಕ್ತಿಗಳು ಕಾಲಕಾಲಕ್ಕೆ ನಿರ್ನಾಮವಾಗುತ್ತಲೇ ಬಂದಿದೆ,ಎಂಬುವುದನ್ನು ಮರೆಯುವಂತಿಲ್ಲ ಎಂದು ಅವರು ಮಾರ್ಮಿಕವಾಗಿ ನುಡಿದರು.
ಇದೇ ಸಂಧರ್ಭ ಕೊಡವ ಅಭಿವೃದ್ಧಿ ನಿಗಮ ಕುರಿತು ಸಭೆಯಲ್ಲಿ ಕೇಳಿದ ಹಲವು ಪ್ರಶ್ನೆಗಳಿಗೆ ಮಂಜು ಚಿಣ್ಣಪ್ಪ ಉತ್ತರಿಸುವುದರ ಅರಿವು ಮೂಡಿಸುವ ಪ್ರಯತ್ನ ಮಾಡಿದರು.
ಸಭೆಯ ಪ್ರಾರಂಭದಲ್ಲಿ ಪ್ರಾಸ್ಥಾವಿಕವಾಗಿ ಮಾತನಾಡಿದ KWRA ಅದ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ, ಕೊಡವ ಭವನ ಸ್ಥಾಪಿಸಿದರ ಹಿಂದೆ ಅರ್ರೆಕಾಡು ಹೊಸ್ಕೇರಿ ಗ್ರಾಮದ ಕೊಡವರು ಒಗ್ಗಟ್ಟಿನಿಂದ ಸೇರಿ ಕೊಡವ ಜನಾಂಗದ ಏಳಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸ್ಪಷ್ಟ ಉದ್ದೇಶವಿದೆ. ಅದಕ್ಕೆ ಪೂರಕವಾಗಿ ಇಂದಿನ ಈ ಚಿಂತನಾ ಸಭೆಯನ್ನು ಏರ್ಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಚಿಂತನೆಯಿದೆ ಎಂದು ಹೇಳಿದರು.
ಇದೇ ಸಂದರ್ಭ ಕೊಕ್ಕಲೆಮಾಡ ಮಂಜು ಚಿಣ್ಣಪ್ಪನವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತುಕಾರ್ಯಕ್ರಮದ ಮೊದಲಿಗೆ ಬಲ್ಲಚಂಡ ವಿಠಲ ಕಾವೇರಪ್ಪ ಸ್ವಾಗತಿಸಿ, ಕಾರ್ಯದರ್ಶಿ ನೆಲ್ಲಮಕ್ಕಡ ಪವನ್ ವಂದಿಸಿದರು.
ಸಭೆಯಲ್ಲಿ ಯುಕೊ ಸದಸ್ಯರಾಡ ನೆಲ್ಲಮಕ್ಕಡ ಮಾದಯ್ಯ, ತೀತಿಮಾಡ ಬೋಸ್ ಅಯ್ಯಪ್ಪ, ಪುದಿಯೊಕ್ಕಡ ದಿನೇಶ್ ಮತ್ತು ಅರೆಕಾಡು ಹೊಸ್ಕೇರಿ KWRA ಸದಸ್ಯರು ಉಪಸ್ಥಿತರಿದ್ದರು.