ಕೊಡವ ಲೆದರ್‌ಬಾಲ್ ಕ್ರಿಕೆಟ್ ಲೀಗ್; ಇಂದಿನಿಂದ ಪ್ಲೇ ಆಫ್ ಪಂದ್ಯ

Apr 24, 2026 - 09:17
Apr 24, 2026 - 09:20
 0  73
ಕೊಡವ ಲೆದರ್‌ಬಾಲ್ ಕ್ರಿಕೆಟ್ ಲೀಗ್; ಇಂದಿನಿಂದ ಪ್ಲೇ ಆಫ್ ಪಂದ್ಯ

ಪೊನ್ನಂಪೇಟೆ, ಏ. 23: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ 3ನೇ ವರ್ಷದ ಟಿ-20 ಮಾದರಿಯ ಕೊಡವ ಲೆದರ್‌ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಕುತೂಹಲ ಘಟ್ಟವನ್ನು ತಲುಪಿದ್ದು, ಇಂದಿನಿಂದ ಪ್ಲೇ ಆಫ್ ಹಂತದ ಪಂದ್ಯಗಳು ನಡೆಯಲಿವೆ.

11 ದಿನಗಳ ಕಾಲ 10 ತಂಡಗಳ ನಡುವೆ ನಡೆದ ಲೀಗ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದ, ಅಂಜಿಗೇರಿ ನಾಡ್, ಟೀಮ್ ಕೊಡವ ಟೈಪ್, ಕೂರ್ಗ್ ಟೈಟಾನ್ಸ್ ಮತ್ತು ಎಂ.ಟಿ.ಬಿ. ರಾಯಲ್ಸ್ ತಂಡಗಳು ಚಾಂಪಿಯನ್ ಟ್ರೋಫಿಗಾಗಿ ತೀವ್ರ ಹಣಾಹಣಿ ನಡೆಸಲಿವೆ.

ಇಂದಿನ ಪಂದ್ಯಗಳು ಬೆಳಗ್ಗೆ 9.30ಕ್ಕೆ ಕ್ವಾಲಿಫಯರ್ 1, ಅಂಜಿಗೇರಿ ನಾಡ್ V/S ಟೀಮ್ ಕೊಡದ ಟ್ರೈಬ್

ಮಧ್ಯಾಹ್ನ 1.30ಕ್ಕೆ : ಎಲಿಮಿನೇಟರ್, ಕೂರ್ಗ್ ಟೈಟನ್ಸ್ V/S ಎಂ.ಟಿ.ಬಿ ರಾಯಲ್ಸ್

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0