ಕೊಡ್ಲಿಪೇಟೆ:ಹ್ಯಾಂಡ್ ಪೋಸ್ಟ್ ನಲ್ಲಿ ಸಂಭ್ರಮದ ಈದ್-ಮಿಲಾದ್ ಸಂದೇಶ ಜಾಥಾ

ಕೊಡ್ಲಿಪೇಟೆ:ಹ್ಯಾಂಡ್ ಪೋಸ್ಟ್ ನಲ್ಲಿ ಸಂಭ್ರಮದ ಈದ್-ಮಿಲಾದ್ ಸಂದೇಶ ಜಾಥಾ

ಕೊಡ್ಲಿಪೇಟೆ : ಸಮೀಪದ ಹ್ಯಾಂಡ್‌ಪೋಸ್ಟ್ ಮಸ್ಜಿದುನ್ನೂರ್ ಸುನ್ನಿ ಜುಮಾ ಮಸೀದಿ ವತಿಯಿಂದ ಆಯೋಜಿಸಿದ ಈದ್-ಮಿಲಾದ್ ಸಂದೇಶ ಜಾಥಾ ಎಲ್ಲರ ಗಮನ ಸೆಳೆಯಿತು. ಪ್ರವಾದಿ ಮುಹಮ್ಮದ್ (ಸ.ಅ) ರವರ 1500 ನೇ ಜನ್ಮದಿನದಂದು ಶುಕ್ರವಾರ ಮಧ್ಯಾಹ್ನದ ನಂತರ ಬ್ಯಾಡಗೊಟ್ಟ ಮದ್ರಸದಿಂದ ಪ್ರಾರಂಭಿಸಿದ ಕಾಲ್ನಡಿಗೆ ಜಾಥಾವು ಹ್ಯಾಂಡ್‌ಪೋಸ್ಟ್ ಸರ್ಕಲ್ ಮೂಲಕ ದೊಡ್ಡಕುಂದ ದವರೆಗೆ ಸಾಗಿತು. ಮದ್ರಸ ವಿದ್ಯಾರ್ಥಿಗಳ ಧಫ್ ಸೇರಿದಂತೆ ಸಾಂಸ್ಕೃತಿಕ ಪ್ರದರ್ಶನವು ಜಾಥಗೆ ಮೇರುಗು ನೀಡಿತು.

 ಮುಖ್ಯ ರಸ್ತೆಬದಿಗಳಲ್ಲಿ ಜಾಥಾದಲ್ಲಿ ಭಾಗವಹಿಸಿದವರಿಗೆ ತಂಪು-ಪಾನೀಯ ಸಿಹಿ ತಿಂಡಿಗಳನ್ನು ವಿತರಿಸಿದರು. ಹ್ಯಾಂಡ್‌ಪೋಸ್ಟ್ ನಲ್ಲಿ ಎಸ್ಸಾರ್ ಪೆಟ್ರೋಲ್ ಬಂಕ್ ಮಾಲಿಕ ತೇಜ್‌ಕುಮಾರ್ ತಂಪು ಪಾನಿಯ ವಿತರಿಸಿದ ಸೌಹಾರ್ದತೆ ಮೆರೆದರು. ಮಸ್ಜಿದ್ ಆಡಳಿತ ಮಂಡಳಿಯ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಹಾಜಿ,ಉಪಾಧ್ಯಕ್ಷ ಸುಲೈಮಾನ್,ಪ್ರಧಾನ ಕಾರ್ಯದರ್ಶಿ ಹನೀಫ್ ,ಕಾರ್ಯದರ್ಶಿಗಳಾದ ಮುನೀರ್,ಹಾರೂನ್ ರಶೀದ್ ,ಕೋಶಾದಿಕಾರಿ ಬಾಸಿತ್, ಸದಸ್ಯರುಗಳಾದ ಝಕರೀಯಾ ,ಸಾಬ್ಜಾನ್ , ಆಝೀಝ್, ಖಾದರ್,ಹಮೀದ್, ದಾವೂದ್ ,ಹಂಝ,ರಹೀಂ, ಸಲಹಾ ಸಮಿತಿ ಸದಸ್ಯರಾದ ಸುಲ್ಯೆಮಾನ್, ಇಬ್ರಾಹಿಂ, ನೂರ್ ಯೂತ್ ಸಮಿತಿ ಅದ್ಯಕ್ಷ ಬಾಸಿತ್ ಹಾಜಿ,ಉಪಾಧ್ಯಕ್ಷ ಹನೀಫ್,ಕಾರ್ಯದರ್ಶಿ ಇಸ್ಮಾಯಿಲ್ ,ಪದಾಧಿಕಾರಿಗಳಾದ ಜಾಸಿಕ್ ,ಶರೀಫ್,ಹಾರಿಸ್ ,ಅಝೀಜ್ ಮುಂತಾದವರಿದ್ದರು.