ಕೊಡ್ಲಿಪೇಟೆ:ಲಾರಿ ಡಿಕ್ಕಿ ಪಡಿಸಿ ಕೊಲೆ ಯತ್ನ ಪ್ರಕರಣ: ಎರಡನೇ ಆರೋಪಿಗೆ ಜಾಮೀನು
ಕೊಡ್ಲಿಪೇಟೆ: 22 -10-2025 ರಂದು ಶನಿವಾರದಂತೆ ಪೊಲೀಸ್ ಠಾಣೆಯಲ್ಲಿ ಕೊಡ್ಲಿಪೇಟೆಯ ಕೆ.ಆರ್. ರಮೇಶ್ ಮತ್ತು ದಿವಾಕರ ಕೆ.ಬಿ ಎಂಬುವರ ಮೇಲೆ, ಉದ್ಯಮಿ ತೇಜಸ್ ಕುಮಾರ್ ಎಂಬುವರ ಕಾರಿಗೆ ಲಾರಿಯಿಂದ ಡಿಕ್ಕಿ ಪಡಿಸಿ ಕೊಲೆ ಯತ್ನ ನಡೆಸಲಾಗಿದೆ ಎಂದು ಪ್ರಕರಣ ದಾಖಲಾಗಿತ್ತು.
ಸದರಿ ವಿಚಾರ ಸಾರ್ವಜನಿಕ ವಲಯದಲ್ಲಿ ತೀವ್ರ ಸಂಚಲನ ಉಂಟುಮಾಡಿತ್ತು.ಸದರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ 2ನೇ ಆರೋಪಿ ದಿವಾಕರ್ ರವರನ್ನು ಶನಿವರಾಸಂತೆ ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ದಿನ 29 10 2025 ರಂದು ಮಡಿಕೇರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎರಡನೇ ಆರೋಪಿಯಾದ ದಿವಾಕರ್ ಅವರಿಗೆ ಜಾಮೀನು ಮಂಜೂರು ಮಾಡಿರುತ್ತದೆ.. ಆರೋಪಿ ಪರ ವಕೀಲರಾದ ದುಗ್ಗಳ ಕಪಿಲ್ ಕುಮಾರ್ ಅವರು ವಾದ ಮಂಡಿಸಿದ್ದರು.