ಕೊಡ್ಲಿಪೇಟೆ; ಪುಟಾಣಿಗಳ ಗ್ರಾಜುಯೇಷನ್ ಸಮಾರಂಭ

Mar 28, 2026 - 00:19
 0  132
ಕೊಡ್ಲಿಪೇಟೆ; ಪುಟಾಣಿಗಳ ಗ್ರಾಜುಯೇಷನ್ ಸಮಾರಂಭ

ಶನಿವಾರಸಂತೆ-ಸಮೀಪದ ಕೊಡ್ಲಿಪೇಟೆ ಕಲ್ಲುಮಠದ ಎಸ್.ಕೆ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಕಿಂಡರ್ ಗಾರ್ಟನ್ ವಿಭಾಗದ ವಿಭಾಗದ ಪುಟಾಣಿಗಳ ಗ್ರಾಜುಯೇಷನ್ ಸಮಾರಂಭವನ್ನು ಶುಕ್ರವಾರ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.

ಪುಟಾಣಿಗಳ ಗ್ರಾಜುಯೇಷನ್ ಸಮಾರಂಭದಲ್ಲಿ ಪಾಲ್ಗೊಂಡ ಪುಟಾಣಿ ವಿದ್ಯಾರ್ಥಿಗಳು ಮತ್ತು ಪೋಷಕರು ಅತ್ಯಂತ ಉತ್ಸಾಹ ಭರಿತರಾಗಿ ಭಾಗವಹಿಸಿ ಸಂಭ್ರಮಪಟ್ಟರು. ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷ ಮತ್ತು ಕಲ್ಲುಮಠದ ಮಠಾದೀಶ ಶ್ರೀ ಮಹಂತ ಸ್ವಾಮೀಜಿ ಸಮಾರಂಭದಲ್ಲಿ ಭಾಗವಹಿಸಿ ಮಕ್ಕಳ ಮುಂದಿನ ಭವಿಷ್ಯವು ಉಜ್ವಲವಾಗಿ ಪಸರಿಸುವಂತೆ ಪುಟಾಣಿಗಳಿಗೆ ಶುಭ ಹಾರೈಸಿದರು.

 ಸಮಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಚ್.ಎಂ.ದಿವಾಕರ್, ಶಾಲಾ ಮುಖ್ಯ ಶಿಕ್ಷಕ ಎಚ್.ಎಂ.ಅಭಿಲಾಷ್, ಅಂಬೇಡ್ಕರ್ ಅಲ್ಪ ಸಂಖ್ಯಾತರ ವಸತಿ ಶಾಲೆಯ ಶಿಕ್ಷಕ ಮಂಜುನಾಥ್, ಶಾಲೆಯ ಪೋಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0