ಕೊಂಡಂಗೇರಿ ಮಖಾಂ ಉರೂಸ್ ಗೆ ಚಾಲನೆ

Apr 11, 2026 - 12:25
 0  118
ಕೊಂಡಂಗೇರಿ ಮಖಾಂ  ಉರೂಸ್ ಗೆ ಚಾಲನೆ

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು :ಇತಿಹಾಸ ಪ್ರಸಿದ್ಧ ಕೊಂಡಂಗೇರಿ ದರ್ಗಾದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ಆಚರಿಸಿಕೊಂಡು ಬರುತ್ತಿರುವ ವಾರ್ಷಿಕ ಉರೂಸ್ ಸಮಾರಂಭಕ್ಕೆ ಗಣ್ಯರು ಶ್ರದ್ಧಾ ಭಕ್ತಿಯ ಚಾಲನೆ ನೀಡಿದರು.

ಶುಕ್ರವಾರ ಜುಮಾ ನಮಾಜಿನ ಬಳಿಕ ದರ್ಗಾಗೆ ತೆರಳಿದ ಸಮುದಾಯ ಬಾಂಧವರು ಸಾಯ್ಯಿದ್ ಎಸ್ ಹಕೀಂ ಅಸ್ಸಖಾಫ್ ತಂಙಳ್ ಆದೂರ್ ಅವರ ನೇತೃತ್ವದಲ್ಲಿ ಮಖಾಂ ಅಲಂಕಾರ ಹಾಗೂ ವಿಶೇಷ ಪ್ರಾರ್ಥನೆ ನೆರವೇರಿಸಿದರು. ಕೊಂಡಂಗೇರಿ ಸುನ್ನೀ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಪಿ. ಎ.ಯೂಸುಫ್ ಹಾಜಿ ಹಾಗೂ ಉಪಾಧ್ಯಕ್ಷರಾದ ಎ. ಇ. ಬಶೀರ್ ಅವರು ಜಂಟಿಯಾಗಿ ಧ್ವಜಾರೋಹಣ ನೆರವೇರಿಸುವ ಮೂಲಕ ಉರೂಸ್ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಉರೂಸ್ ಸಮಾರಂಭವು ಏ. 14ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೋಂದಿಗೆ ಜರುಗಲಿದ್ದು ಏ.13ರಂದು ಸೋಮವಾರ ಮಧ್ಯಾಹ್ನ ಸರ್ವಧರ್ಮ ಸಮ್ಮೇಳನ ನಡೆಯಲಿದೆ.ಅಂದು ಸಂಜೆ 4.ಗಂಟೆಗೆ ಭಕ್ತಾಧಿಗಳಿಗೆ ಅನ್ನದಾನ ಕಾರ್ಯಕ್ರಮ ನೆರವೇರಲಿದೆ.

 ಈ ಸಂದರ್ಭ ಮಸೀದಿಯ ತಕ್ಕ ಮುಖ್ಯಸ್ಥರಾದ ಪಿ.ಎ.ಕುಂಞಿ ಅಹ್ಮದ್ ಮುಸ್ಲಿಯಾರ್,ಪಿ. ಎ.ಅಬ್ದುಲ್ ಅಝೀಝ್ ಹಾಜಿ,ಎಂ.ಐ. ಇಕ್ಬಾಲ್ ಹಾಜಿ,ಕೆ. ಎಂ.ಶಾದುಲಿ,ಮುದರ್ರಿಸ್ ಮೊಹಿಯ್ಯದ್ದೀನ್ ಫಾಳಿಲಿ ಅಲ್ ಅಫ್ಲಿಲಿ,ಕೊಂಡಂಗೇರಿ ಜಮಾಅತ್ ಪ್ರಧಾನ ಕಾರ್ಯದರ್ಶಿ ಪಿ.ಎ.ಮುಜೀಬ್,ಕೋಶಾಧಿಕಾರಿ ಅಬ್ದುಲ್ ಕರೀಂ ಹಾಜಿ,ಹೆಚ್ಚುವರಿ ಕಾರ್ಯದರ್ಶಿ ಜೆ.ಎಸ್. ಮೊಹಮ್ಮದ್ ಹನೀಫ್ ,ಜಮಾಅತ್ ಆಡಳಿತ ಮಂಡಳಿ ಸದಸ್ಯರು,ಊರಿನ ಹಿರಿಯರು,ಜಮಾಅತ್ ನ ಸರ್ವ ಸದಸ್ಯರು ಮತ್ತಿತರರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0