ಕೊಟ್ಟಮುಡಿ ಆಝಾದ್ ನಗರ ಮದರಸ ಅಧ್ಯಾಪಕರಾದ ಎಡಪಾಲ ಅಬ್ದುಲ್ ಖಾದರ್ ಮುಸ್ಲಿಯಾರ್ ರಾಜ್ಯಮಟ್ಟದ ಮುಅಲ್ಲಿಂ ಪ್ರಶಸ್ತಿಗೆ ಆಯ್ಕೆ
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು : ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್ ಜೆಎಂ) ರಾಜ್ಯ ಸಮಿತಿ ಸಾಧಕ ಮುಅಲ್ಲಿಮರನ್ನು ಗುರುತಿಸಿ ನೀಡಲ್ಪಡುವ ಮುಅಲ್ಲಿಂ ಪ್ರಶಸ್ತಿಗೆ ಮೂರ್ನಾಡು ರೇಂಜ್ ಗೆ ಒಳಪಟ್ಟ ಕೊಟ್ಟಮುಡಿ ಆಝಾದ್ ನಗರ ಮದರಸ ಆಧ್ಯಾಪಕರಾದ ಎಡಪಾಲ ಅಬ್ದುಲ್ ಖಾದರ್ ಮುಸ್ಲಿಯಾರ್ ಆಯ್ಕೆಯಾಗಿದ್ದಾರೆ. ಮಂಗಳೂರಿನ ಪುರಭವನದಲ್ಲಿ ಅಕ್ಟೋಬರ್ 14ರಂದು ನಡೆಯಲಿರುವ ಮುಅಲ್ಲಿಂ ಜಿಲ್ಲಾ ಸಮ್ಮೇಳನದಲ್ಲಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್ ಜೆಎಂ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಮೀನು ಶರೀಅಃ ಸಯ್ಯಿದ್ ಅಲಿ ಬಾಫಕಿ ತಂಙಳ್ ರವರಿಂದ ಖಾದರ್ ಮುಸ್ಲಿಯಾರ್ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಒಂದೇ ಮದರಸದಲ್ಲಿ ಸುಧೀರ್ಘ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತ ಕೇಂದ್ರ ಸಮಿತಿ ಆಯೋಜಿಸಿದ ಹತ್ತಾರು ತರಬೇತಿಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರ ಪಡೆದು,ಕಳೆದ 15 ವರ್ಷಗಳ ಹಿಂದೆ ರಾಜ್ಯ ಮುಅಲ್ಲಿಂ ಸರ್ವಿಸ್ ಕಾರ್ಡ್ ಪಡೆದು,ರಾಜ್ಯ ಸಮಿತಿಯ ಯೋಜನೆಗಳಲ್ಲಿ ಪಾಲ್ಗೊಂಡು ಅಧ್ಯಾಪಕರ ಒಕ್ಕೂಟದಲ್ಲಿ ಸಕ್ರಿಯತೆ ಮುಂತಾದ ಹಲವು ಮಾನದಂಡಗಳುಳ್ಳ ಅಧ್ಯಾಪಕರಿಗೆ ನೀಡಲ್ಪಡುವ ಗೌರವ ಪ್ರಶಸ್ತಿಯನ್ನು ಅಬ್ದುಲ್ ಖಾದರ್ ಮುಸ್ಲಿಯಾರ್ ಪಡೆಯಲಿದ್ದಾರೆ.