ಕೂಡ್ಲೂರು : ಕಾರ್ಮಿಕರ ಘಟಕದ ವತಿಯಿಂದ ಕಾರ್ಮಿಕ ದಿನಾಚರಣೆ

May 2, 2026 - 13:15
 0  195
ಕೂಡ್ಲೂರು : ಕಾರ್ಮಿಕರ ಘಟಕದ ವತಿಯಿಂದ ಕಾರ್ಮಿಕ ದಿನಾಚರಣೆ

ಕುಶಾಲನಗರ : ತಾಲ್ಲೂಕಿನ ಕೂಡ್ಲೂರು ಕೈಗಾರಿಕಾ ಪ್ರದೇಶದ ಕಾರ್ಮಿಕ ಘಟಕದ ವತಿಯಿಂದ ಶುಕ್ರವಾರ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು.

ಕಾರ್ಮಿಕ ಘಟಕದ ಅಧ್ಯಕ್ಷ ಮಂಜು ನೇತೃತ್ವದಲ್ಲಿ ಘಟಕದ ಸದಸ್ಯರು, ಕಾಫಿ ವರ್ಕ್ಸ್ ನ ಮಹಿಳಾ ಕಾರ್ಮಿಕರು ಕೈಗಾರಿಕಾ ಘಟಕದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಕಾರ್ಮಿಕರ ಪರ ಘೋಷಣೆಗಳನ್ನು ಕೂಗಿದರು. ಎಸ್.ಎಲ್.ಎನ್ ವರ್ಕ್ಸ್ ಬಳಿಯಿಂದ ದೊಡ್ಡಮ್ಮ ತಾಯಿ ಬನದ ತನಕ ಮೆರವಣಿಗೆ ನಡೆಸಿದ ಕಾರ್ಮಿಕರು ವರ್ಕ್ಸ್ ಗಳಲ್ಲಿ ಕೆಲಸ ಆರಂಭ ಮತ್ತು ಅಂತ್ಯದ ಸಮಯದಲ್ಲಿ ಕೂಡ್ಲೂರು ಕೈಗಾರಿಕಾ ಕೇಂದ್ರದ ಹೆದ್ದಾರಿಯಲ್ಲಿ ಸಾರಿಗೆ ಬಸ್ ಗಳನ್ನು ನಿಲುಗಡೆಗೊಳಿಸಬೇಕು.ಸುಸಜ್ಜಿತ ಬಸ್ ತಂಗುದಾಣ ಒದಗಿಸುವಂತೆ ಒತ್ತಾಯಿಸಿದರು.

 ಐ.ಎನ್.ಟಿ.ಯು.ಸಿ ಜಿಲ್ಲಾಧ್ಯಕ್ಷ ಬಿ.ಡಿ.ಅಣ್ಣಯ್ಯ ಮಾತನಾಡಿ, ಸರ್ಕಾರ ಕಾರ್ಮಿಕರ ಸಮಸ್ಯೆಗಳಿಗೆ, ಬೇಡಿಕೆಗಳಿಗೆ ಸಮರ್ಪಕವಾಗಿ ಸ್ಪಂದಿಸಿ ಕಲ್ಯಾಣ ಯೋಜನೆಗಳನ್ನು ಸಮರ್ಪಕವಾಗಿ ಒದಗಿಸಿ ಕಾರ್ಮಿಕರ ಹಿತ ಕಾಯಬೇಕು ಎಂದು ಒತ್ತಾಯಿಸಿದರು. ಕಾರ್ಮಿಕ ಘಟಕದ ಅಧ್ಯಕ್ಷ ಮಂಜು ಮಾತನಾಡಿ,ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿರುವ ಕೆಲವು ಕಾಫಿ ಕ್ಯೂರಿಂಗ್ ಘಟಕಗಳಲ್ಲಿ ನಡೆಯುತ್ತಿರುವ ತಾರತಮ್ಯವನ್ನು ನಿಲ್ಲಿಸಬೇಕು.

ಸಮಾನ ವೇತನ ವ್ಯವಸ್ಥೆ ಜಾರಿಯಾಗಬೇಕು.ಕಾರ್ಮಿಕರಿಗೆ ಅನುಕೂಲವಾಗುವಂತೆ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಬೇಕು ಒತ್ತಾಯಿಸಿದರು. ಈ ಸಂದರ್ಭ ಕಾರ್ಮಿಕ ಘಟಕದ ಕಾರ್ಯದರ್ಶಿ ಶಾಂತ, ಖಜಾಂಚಿ ಪುಷ್ಪ, ಕೂಡುಮಂಗಳೂರು ಗ್ರಾಪಂ ಮಾಜಿ ಸದಸ್ಯೆ ಗೌರಮ್ಮ, ಪ್ರಮುಖರಾದ ಸುಜಾತ, ರತ್ಮಮ್ಮ ಮತ್ತಿತರರು ಪಾಲ್ಗೊಂಡಿದ್ದರು. ಕುಶಾಲನಗರ ಸಮೀಪದ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕ ಘಟಕದ ವತಿಯಿಂದ ಶುಕ್ರವಾರ ಕಾರ್ಮಿಕರ ದಿನಾಚರಣೆ ಅಂಗವಾಗಿ ಮೆರವಣಿಗೆ ನಡೆಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0