ಕೂಡುಮಂಗಳೂರು ಗ್ರಾ.ಪಂ ಸಾಮಾನ್ಯ ಸಭೆ: ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ
ಕುಶಾಲನಗರ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯು ಅಧ್ಯಕ್ಷರಾದ ಬಾಸ್ಕರ್ ನಾಯಕ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಜನರು ಹೈರಾಣಾಗಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು. ಬಸವೇಶ್ವರ ಬಡವಣೆಯಲ್ಲಿ ಬೀದಿ ನಾಯಿಗಳಿಂದ ಇಬ್ಬರು ಕಡಿತಕ್ಕೊಳಗಾಗೊದ್ದು, ಎರಡು ಆಡುಗಳನ್ನು ಕೂಡಾ ಕಡಿದು ಕೊಂದಿದೆ. ನಾಳೆಯ ದಿನ ಮಕ್ಕಳು,ಶಾಲಾ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿದ ಸದಸ್ಯ ಕೆ.ಬಿ.ಶಂಶುದ್ಧೀನ್, ಸಾರ್ವಜನಿಕರ ಹಿತದೃಷ್ಟಿಯಿಂದ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಚಿಕ್ಕತ್ತೂರಿನಲ್ಲಿ ಅಕ್ರಮವಾಗಿ ನೆಲೆಸಿರುವವರಿಗೆ ನೀರಿನ ಸಂಪರ್ಕ ಒದಗಿಸುವಂತೆ ಸದಸ್ಯ ದಿನೇಶ್ ಆಗ್ರಹಿಸಿದರು. ಕಾನೂನು ರೀತಿಯಲ್ಲಿ ನೀರಿನ ಸಂಪರ್ಕ ಕಲ್ಪಿಸಲು ಸಾಧ್ಯವಾಗುವುದಿಲ್ಲ ಎಂದು ಪಿಡಿಓ ಸಂತೋಷ್ ಉತ್ತರಿಸಿದರು. ಬಡವರಿಗೆ ನೀರಿನ ಸಂಪರ್ಕ ಕಲ್ಪಿಸಬೇಕು ಎಂದು ಹಿರಿಯ ಸದಸ್ಯರಾದ ಬೋಗಪ್ಪ, ಫಿಲೋಮಿನಾ, ಪಾರ್ವತಿ ಧರ್ಮಪ್ಪ ಧ್ವನಿಗೂಡಿಸಿದರು. ಕಾನೂನಾತ್ಮಕವಾಗಿ ಇದಕ್ಕೆ ಅವಲಾಶವಿಲ್ಲ ಎಂದು ಪಿಡಿಓ ಸ್ಪಷ್ಟಪಡಿಸಿದರು.
ಸುಂದರನಗರ ಬಸ್ ತಂಗುದಾಣದಲ್ಲಿ ಮಧ್ಯ ಬಾಟಲಿ ಇನ್ನಿತರ ಅನಗತ್ಯ ವಸ್ತುಗಳು ಬಿದ್ದಿರುತ್ತವೆ. ಮಧ್ಯವ್ಯಸನಿಗಳು ಮಧ್ಯ ಸೇವಿಸುವ ಸ್ಥಳವಾಗಿಮಾರ್ಟಟ್ಟಿದೆ. ಮಹಿಳೆಯರು ಮಕ್ಕಳು ತಂಗುದಾಣದಲ್ಲಿ ನಿಲ್ಲಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬಸ್ ತಂಗುದಾಣವನ್ನು ಪಂಚಾಯಿತಿ ಮಳಿಯನ್ನಾಗಿ ಪರಿವರ್ತಿಸುವಂತೆ ಸದಸ್ಯ ಕೆ.ಬಿ.ಶಂಶುದ್ಧೀನ್ ಸಭೆಗೆ ತಿಳಿಸಿದರು. ಇದಕ್ಕೆ ಆಶಾ ವೆಂಕಟೇಶ್ ಧ್ವನಿಗೂಡಿಸಿದರು. ಸುಂದರನಗರ ಅಕ್ರಮ ಕಟ್ಟಡದ ಬಗ್ಗೆ ಕೆ.ಬಿ.ಶಂಶುದ್ಧೀನ್ ಮಾಹಿತಿ ಪಡೆದರು. ಆದಷ್ಟು ಕಟ್ಟಡ ಪಂಚಾಯಿತಿ ಸುಪರ್ದಿಗೆ ಬರಲಿದೆ ಎಂದು ಪಿಡಿಒ ಮಾಹಿತಿ ನೀಡಿದರು.
ಸದಸ್ಯೆ ಫಿಲೋಮಿನಾರವರು ಬಸವನತ್ತೂರಿಗೆ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸುವಂತೆ ಆಗ್ರಹಿಸಿದರು. ಇದಕ್ಕೆ ಸದಸ್ಯೆ ಗೌರಮ್ಮ, ಇಂದಿರ ರಮೇಶ್ ಸಹಮತ ವ್ಯಕ್ತಪಡಿಸಿದರು. ಹೊಲಿಗೆಯಂತ್ರದ ಫಲಾನುಭವಿಗಳ ಬಗ್ಗೆ ಸೋಲಾರ್ ಬೀದಿ ದೀಪಗಳ ಬಗ್ಗೆ ಚರ್ಚೆ ನಡೆದವು.
ಅಧ್ಯಕ್ಷರ ಅನುಮತಿ ಮೇರೆಗೆ ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆದವು. ಸಭೆಯಲ್ಲಿ ಹಿಂದಿನ ತಿಂಗಳ ಜಮಾ ಖರ್ಚನ್ನು ಅನುಮೋದಿಸಲಾಯಿತು. ವಿದ್ಯುತ್ ಎನ್.ಒ.ಸಿ, ಪರವಾನಗಿ ಹಾಗೂ ಸಾರ್ವಜನಿಕರ ಅರ್ಜಿಗಳ ವಿಲೇವಾರಿ ನಡೆಯಿತು.
ಈ ಸಂದರ್ಭ ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿಗಳಾದ ಮಮತ, ಅವಿನಾಶ್, ಪವಿತ್ರ, ಲೈನಾ ಇದ್ದರು.