ಕುಂಜಿಲಗೇರಿ:ನೂತನ ವಿದ್ಯುತ್ ಮಾರ್ಗ ಉದ್ಘಾಟನೆ

ಕುಂಜಿಲಗೇರಿ:ನೂತನ ವಿದ್ಯುತ್ ಮಾರ್ಗ ಉದ್ಘಾಟನೆ

ವಿರಾಜಪೇಟೆ: ಕುಂಜಲಗೇರಿ ನಿವಾಸಿಗಳಿಗೆ, ಗುಣಮಟ್ಟದ ವಿದ್ಯುತ್ ಪೂರೈಸಲು ಅಳವಡಿಸಿದ ನೂತನ ವಿದ್ಯುತ್ ಮಾರ್ಗದ ಉದ್ಘಾಟನೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಇಂದು ನೆರವೇರಿಸಿದರು.

ಈ ಹಿಂದೆ ಕುಂಜಲಗೇರಿ ನಿವಾಸಿಗಳಿಗೆ/ಗ್ರಾಹಕರಿಗೆ ಪಾರಣೆ-ಬೊಳ್ಳುಮಾಡು 11 ಕೆವಿ HT ಫೀಡರಿನ ಮೂಲಕ ವಿದ್ಯುತ್ ಸರಬರಾಜು ಮಾಡಲಾಗಿತ್ತು. ಆದರೆ ಮಳೆಗಾಲದಲ್ಲಿ ಮತ್ತು ಪಾರಣೆಯಲ್ಲಿ-ಮೂರ್ನಾಡು 33/11 KV ಉಪಕೇಂದ್ರದಲ್ಲಿ ಅಡಚಣೆಯಾದಾಗ, ಕುಂಜಲಗೇರಿ ಗ್ರಾಹಕರಿಗೆ ಹಲವು ದಿನಗಳ ಕಾಲ ವಿದ್ಯುತ್ ಸಂಪರ್ಕ ಇರುತ್ತಿರಲಿಲ್ಲ. ಇದನ್ನು ಮನಗಂಡ ಶಾಸಕರು, ವಿರಾಜಪೇಟೆ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ಸಂಪರ್ಕ ಕಲ್ಪಿಸಲು, ಬೊಳ್ಳುಮಾಡು ಸೇತುವೆಯಿಂದ ಕುಂಜಲಗೇರಿ ಮೊದಲ ಟ್ರಾನ್ಸ್ಫರ್ ವರೆಗೆ ಸುಮಾರು 3 ಕಿಲೋ ಮೀಟರ್ ಉದ್ದಕ್ಕೆ, ಇನ್ಸಲೇಟೆಡ್ ಕವರ್ಡ್ ಕಂಡಕ್ಟರ್ (Insulated Covered Conductor) ಆಳವಡಿಸುವುದರ ಮೂಲಕ ಹಾಗೂ 85 ಹೊಸ ವಿದ್ಯುತ್ ಕಂಬಗಳನ್ನು ಉಪಯೋಗಿಸಿ, ಸುಮಾರು ₹ 1 ಕೋಟಿ ವೆಚ್ಚದಲ್ಲಿ ಈ ಕಾಮಗಾರಿಗಳನ್ನು ಇಲಾಖೆಯ ಮುಖಾಂತರ ಪೂರೈಸಿದ್ದರು.

ಇಂದು ಇದರ ಲೋಕಾರ್ಪಣೆ ಸಂದರ್ಭ, ಸ್ಥಳೀಯ ಗ್ರಾಮಸ್ಥರು ಹಾಗೂ ಯುವಕರು ಮಾನ್ಯ ಶಾಸಕರಿಗೆ ಮನದಾಳದ ಧನ್ಯವಾದಗಳು ಅರ್ಪಿಸಿದರು. ಈ ಸಂದರ್ಭದಲ್ಲಿ ಯೂನಿಯನ್ ಅಧ್ಯಕ್ಷರು ಹಾಗೂ ವಲಯ ಅಧ್ಯಕ್ಷರು ಬಟ್ಟಕಳಂದ ರಾಜ, ಪ್ರಮುಖರಾದ ದಯಾ ಬಿ ಎಚ್, ಲೋಕೇಶ್ ಮಾದಯ್ಯ, ಅಜಿತ್, ನವೀನ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.