ಕುಶಾಲನಗರ: 13.3 ಎಕರೆ ಜಾತ್ರಾ ಮೈದಾನವೇ ತಾಲ್ಲೂಕು ಕ್ರೀಡಾಂಗಣವಾಗಲಿ : ಸುಸಜ್ಜಿತ ಕ್ರೀಡಾಂಗಣಕ್ಕೆ ಜಾಗ ಮೀಸಲಿಡಿ: ಪುರಸಭೆಗೆ ಸಮಿತಿ ಮನವಿ
ಕುಶಾಲನಗರ: ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಮತ್ತು ಪ್ರತಿಭೆಗಳನ್ನು ಗುರುತಿಸಲು ಕುಶಾಲನಗರಕ್ಕೆ ಸುಸಜ್ಜಿತ ಕ್ರೀಡಾಂಗಣದ ಅವಶ್ಯಕತೆ ಇದೆ ಎಂದು ದಿ. ಆರ್. ಗುಂಡೂರಾವ್ ಕ್ರೀಡಾಂಗಣ ಸಮಿತಿ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದೆ.
ಗುಂಡೂರಾವ್ ಬಡಾವಣೆಯಲ್ಲಿರುವ 13.3 ಎಕರೆ ಜಾತ್ರಾ ಮೈದಾನ,ಬ ಪ್ರಸ್ತುತ ಕ್ರೀಡಾಕೂಟಗಳಿಗೆ ಬಳಕೆಯಾಗುತ್ತಿರುವ ಈ ಮೈದಾನವನ್ನು ತಾಲ್ಲೂಕು ಕ್ರೀಡಾಂಗಣವನ್ನಾಗಿ ಮೇಲ್ದರ್ಜೆಗೇರಿಸಿ, ದಾಖಲೆ ಸಿದ್ಧಪಡಿಸಿ ಮೀಸಲಿಡಬೇಕು,ಕುಶಾಲನಗರದಲ್ಲಿ ಯುವಕರಿಗೆ, ಕ್ರೀಡಾಪಟುಗಳಿಗೆ ಪ್ರತ್ಯೇಕ ಸುಸಜ್ಜಿತ ಕ್ರೀಡಾಂಗಣ ಇಲ್ಲದಿರುವುದು. "ಯುವ ಪೀಳಿಗೆಯ ಕ್ರೀಡಾ ಭವಿಷ್ಯವನ್ನು ಉಜ್ವಲಗೊಳಿಸಲು ತಾವು ಸಹಕರಿಸಬೇಕು" ಎಂದು ಸಮಿತಿ ವಿನಂತಿಸಿದೆ.
ಗೌರವ ಅಧ್ಯಕ್ಷ ಪವನ್ ಗಣಪತಿ, ಅಧ್ಯಕ್ಷ ಲಕ್ಷ್ಮೀನಾರಾಯಣ್, ಉಪಾಧ್ಯಕ್ಷ ಫಯಾಜ್ ಮಣಿ, ಪ್ರಧಾನ ಕಾರ್ಯದರ್ಶಿ ಆದಂ ಎಸ್., ಕಾರ್ಯದರ್ಶಿ ದೇವೇಂದ್ರ ಸೋಮಪ್ಪ, ಖಜಾಂಚಿ ಸಲ್ಮಾನ್ ಅಹ್ಮದ್, ರಕ್ಷಿತ್ ಮಾವಾಜಿ, ಮಹದೇವ್, ಖಾಜಾ, ಚಂದ್ರಶೇಖರ್ ಹಾಗೂ ಮಾಧ್ಯಮ ಸಲಹೆಗಾರ ಟಿ.ಆರ್. ಪ್ರಭುದೇವ್ ಮನವಿ ಸಲ್ಲಿಕೆ ವೇಳೆ ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
