ಕುಶಾಲನಗರ:ಹೆದ್ದಾರಿಯಲ್ಲಿ ದನಗಳ ಸಂಚಾರ
ಕುಶಾಲನಗರ, ಜು.5 : ಕುಶಾಲನಗರದ ರಸ್ತೆಗಳಲ್ಲಿ ದನಗಳ ಸಂಚಾರ ಮಿತಿಮೀರಿದ್ದು, ಮೇವು ನೀಡಲು ಅಸಮರ್ಥರಾದ ದನದ ಮಾಲೀಕರು ಕೈಚೆಲ್ಲಿ ಪಟ್ಟಣಕ್ಕೆ ಗಿರಕಿ ಹೊಡೆಯಲು ಬಿಡುತ್ತಿರುವುದು ಗಂಭೀರವಾಗಿ ಪರಿಗಣಿಸಲ್ಪಟ್ಟಿದೆ.
ಹುಲ್ಲಾದರೂ ತಿನ್ನಲಿ, ಪ್ಲಾಸ್ಟಿಕ್ ಆದ್ರು ತಿನ್ನಲಿ ಲೀಟರ್ಗಟ್ಟಲೆ ಹಾಲು ನೀಡಲಿ ಎಂಬ ಕಠೋರ ಧೋರಣೆಯಲ್ಲಿರುವ ದನದ ಮಾಲೀಕರಿಗೆ ಕುಶಾಲನಗರ ಪುರಸಭೆ ಕಾನೂನಿನ ಜಾಟಿ ಬೀಸಬೇಕಾದ ಅನಿವಾರ್ಯತೆ ಇದ್ದು, '1966 ಕರ್ನಾಟಕ ಅತಿಕ್ರಮಣ' ಕಾಯ್ದೆಯ ಪ್ರಕಾರ ಇದು ಸ್ಪಷ್ಟ ಅಪರಾಧವಾಗಿದೆ. "ಕನಿಷ್ಠ ಮೇವನ್ನು ನೀಡಲಾಗದವರು ದನಗಳನ್ನು ಏಕೆ ಸಾಕಬೇಕು?? ರಸ್ತೆಯಲ್ಲಿ ಬಿಟ್ಟಾಗ ಅವುಗಳಿಗೂ, ವಾಹನ ಚಾಲಕರಿಗೂ ಅಪಾಯ.
ಇದಕ್ಕೆ ಸಾಕ್ಷಿ ಎಂಬಂತೆ ಕೆಲವು ದನಗಳು ಕುಂಟುತ್ತಾ ಸಾಗುತ್ತಿರುತ್ತವೆ." ಎಂದು ಪ್ರತ್ಯಕ್ಷದರ್ಶಿ ಯೊಬ್ಬರು ದೂರಿದ್ದಾರೆ. ರಸ್ತೆಯ ಮಧ್ಯೆ ಸಾಗುತ್ತಿದ್ದ ದನವೊಂದನ್ನು ತಪ್ಪಿಸಲು ಬಲಬದಿ ತಿರುಗಿಸಿದಾಗ ಹಿಂಬದಿಯಿಂದ ವಾಹನಗೊಂದು ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆಯನ್ನು ಮತ್ತೊಬ್ಬರು ನೆನಪಿಸಿಕೊಂಡರು. ವರದಿ: ಶ್ರೀಧರ್ ನಾರಾಯಣ್
What's Your Reaction?
Like
0
Dislike
0
Love
0
Funny
0
Angry
0
Sad
1
Wow
0

