ಕುಶಾಲನಗರ: ಜೂನ್ 27ರಂದು ಮಾಧ್ಯಮ ಸ್ಪಂದನದ ವತಿಯಿಂದ ಬೃಹತ್ ರಕ್ತದಾನ ಶಿಬಿರ

Jun 12, 2026 - 11:52
 0  51
ಕುಶಾಲನಗರ: ಜೂನ್ 27ರಂದು ಮಾಧ್ಯಮ ಸ್ಪಂದನದ ವತಿಯಿಂದ ಬೃಹತ್ ರಕ್ತದಾನ ಶಿಬಿರ

ಕುಶಾಲನಗರ:ಇದೇ ಜೂನ್ ತಿಂಗಳ ‌27ರಂದು ಕುಶಾಲನಗರದಲ್ಲಿ ಮಾಧ್ಯಮ ಸ್ಪಂದನ ವತಿಯಿಂದ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರಕ್ಕೆ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ರಕ್ತನಿಧಿ ಕೇಂದ್ರ ಸಹಕಾರ ನೀಡಲಿದೆ‌ ಎಂದು ಮಾಧ್ಯಮ ಸ್ಪಂದನದ ಸಂಸ್ಥಾಪಕರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ತಿಳಿಸಿದ್ದಾರೆ.

ಸಮಾಜಮುಖಿ ಸೇವೆಯ ಈ ಮಹತ್ವದ ಕಾರ್ಯಕ್ರಮದಲ್ಲಿ ಕನಿಷ್ಠ 100 ಮಂದಿ ರಕ್ತದಾನ ಮಾಡುವ ನಿರೀಕ್ಷೆ ಇದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಮಾನವೀಯ ಕಾರ್ಯಕ್ಕೆ ಕೈಜೋಡಿಸಬೇಕೆಂದು ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ಮನವಿ ಮಾಡಿದ್ದಾರೆ. ರಕ್ತದಾನ ಮಾಡಲು ಇಚ್ಛಿಸುವವರು ತಮ್ಮ ಹೆಸರನ್ನು ಶಿಬಿರದ ಸಂಚಾಲಕರಾದ ಕೆ.ಬಿ. ಶಂಶುದ್ದೀನ್ (+918453747382) ಅವರಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0