ಕುಶಾಲನಗರ ಪುರಸಭೆಯಿಂದ ಶೀಘ್ರ ಸ್ಪಂದನೆ; ಕುಸಿತದ ಭೀತಿಯಲ್ಲಿರುವ ಸಾಯಿ ಬಡಾವಣೆಯ ಕಾಂಕ್ರೀಟ್ ರಸ್ತೆ ಪರಿಶೀಲನೆ
ಕುಶಾಲನಗರ, ಜು.8: 'ಕುಸಿತದ ಭೀತಿಯಲ್ಲಿ ಸಾಯಿ ಬಡಾವಣೆಯ ಕಾಂಕ್ರೀಟ್ ರಸ್ತೆ' ವರದಿಗೆ ಶೀಘ್ರ ಸ್ಪಂದಿಸಿದ ಪುರಸಭೆಯ ಮುಖ್ಯಾಧಿಕಾರಿ ಗಿರೀಶ್, ಆರೋಗ್ಯಾಧಿಕಾರಿ ಉದಯಕುಮಾರ್ ಮತ್ತು ಸಿಬ್ಬಂದಿ ಇಂದು ಬೆಳ್ಳಂ ಬೆಳಗ್ಗೆ ಮಳೆಯಲ್ಲಿಯೆ ಕುಸಿಯುವ ಹಂತದಲ್ಲಿರುವ ಕಾಂಕ್ರೀಟ್ ರಸ್ತೆಯ ತಳಭಾಗ ಪರಿಶೀಲಿಸಿದರು.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಮುಖ್ಯಾಧಿಕಾರಿ ಈ ಕೂಡಲೆ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡುವ ಯೋಜನೆ ತಯಾರಿಸಿ ಎನ್ ಡಿ ಆರ್ ಐ ಹಣಕಾಸಿನ ಯೋಜನೆ ಅಡಿಯಲ್ಲಿ ಕಾಮಗಾರಿ ಶೀಘ್ರದಲ್ಲಿಯೇ ನಡೆಸಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವರದಿ: ಶ್ರೀಧರ್ ನಾರಾಯಣ್
What's Your Reaction?
Like
1
Dislike
1
Love
0
Funny
0
Angry
1
Sad
1
Wow
0
