ಕುಶಾಲನಗರ; ನೆಹರು ಬಡಾವಣೆ ಮುನೇಶ್ವರ ದೇವರ ಪೂಜೋತ್ಸವ

Feb 15, 2026 - 14:19
 0  191
ಕುಶಾಲನಗರ; ನೆಹರು ಬಡಾವಣೆ ಮುನೇಶ್ವರ ದೇವರ ಪೂಜೋತ್ಸವ

ಕುಶಾಲನಗರ : ನಗರದ ಗೊಂದಿಬಸವನಹಳ್ಳಿ ರಸ್ತೆಯ ನೆಹರು ಬಡಾವಣೆಯಲ್ಲಿ ಸ್ಥಳೀಯ ಭಕ್ತಾಧಿಗಳ ಪ್ರಯತ್ನದಿಂದಾಗಿ ಅರಳಿ ಮರದ ಆವರಣದಲ್ಲಿನ ಮುನೇಶ್ವರ ದೇವರಿಗೆ ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾಧಿಗಳು ನಡೆದವು. ಭಾನುವಾರ ಬೆಳಿಗ್ಗೆ 9.30 ಗಂಟೆಯಿಂದ ಮುನೇಶ್ವರ ದೇವರ ಕೈಂಕರ್ಯಗಳು ಜರುಗಿದವು.

ನೆಹರು ಬಡಾವಣೆಯ ವಿಶಾಲ ಆವರಣದಲ್ಲಿರುವ ಬೃಹತ್ ವೃಕ್ಷ ದ ಆವರಣದಲ್ಲಿ ಭಕ್ತಾಧಿಗಳು ನಿರ್ಮಿಸಿರುವ ಮುನೇಶ್ವರ ಸನ್ನಿಧಿಯಲ್ಲಿ ಬಡಾವಣೆ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿ ನೂರಾರು ಭಕ್ತರು ಆಗಮಿಸಿ ಪೂಜಾ ಮಹೋತ್ಸವದಲ್ಲಿ ಭಾಗಿಯಾದರು.

 ಮಧ್ಯಾಹ್ನ ಮಹಾ ಮಂಗಳಾರತಿ ನಂತರ ತೀರ್ಥ ಪ್ರಸಾದ ಹಾಗೂ ಅನ್ನಪ್ರಸಾದ ವಿನಿಯೋಗ ಮಾಡಲಾಯಿತು. ದೇವಾಲಯ ಸಮಿತಿಯ ಅಧ್ಯಕ್ಷರಾದ ಸುಂದರೇಶ್, ಕಾರ್ಯದರ್ಶಿ ಹೆಚ್. ಟಿ. ಉದಯ್, ಖಜಾಂಚಿ ಧನರಾಜ್, ಗೌರವಾಧ್ಯಕ್ಷ ಜಿ.ಬಿ. ಜಗದೀಶ್, ಲಿಂಗಂ, ದಯಾನಂದ, ಎಂ.ಕೆ. ದಿನೇಶ್, ಎಸ್. ಜೆ. ಚಂದ್ರು ಮೊದಲಾದವರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0