ಕುಶಾಲನಗರ : ಛಾಯಾಚಿತ್ರಗ್ರಾಹಕರ ಕಾರ್ಯಾಗಾರ

Apr 19, 2026 - 14:54
 0  229
ಕುಶಾಲನಗರ : ಛಾಯಾಚಿತ್ರಗ್ರಾಹಕರ ಕಾರ್ಯಾಗಾರ

ಕುಶಾಲನಗರ : ಕೊಡಗು ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದಿಂದ ನಿಕಾನ್ ಕ್ಯಾಮರಾ ಕಾರ್ಯಗಾರ ಇಲ್ಲಿನ ಟಾಪ್ ಇನ್ ಟೌನ್ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ಬೈಲುಕುಪ್ಪೆ ಬೋಧಿಸತ್ವ ಟ್ರಸ್ಟ್ ಸ್ಥಾಪಕ ಕರ್ಮ ರಿಂಫೊಚೆ ಅವರು ಉದ್ಘಾಟಿಸಿ ಮಾತನಾಡಿ,ನೂರಾರು ವರ್ಷಗಳಿಗೂ ಸ್ಮರಣೆ‌ ಮಾಡುವಂತಹ ಸೇವೆಯನ್ನು ಫೋಟೋಗ್ರಾಫರ್ಸ್ ಒದಗಿಸುತ್ತಿರುವುದು ಮಹತ್ಕಾರ್ಯ ಎಂದರು.

ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ,ಆಧುನಿಕತೆಗೆ ತಕ್ಕಂತೆ ತಮ್ಮ ವೃತ್ತಿ ಕೌಶಲವನ್ನು ಅಭಿವೃದ್ಧಿ ಮಾಡಿಕೊಂಡು ಮುಂದೆ ಸಾಗಬೇಕು ಎಂದು ಕರೆ ನೀಡಿದರು.

 ಸಮಾಜ ಸೇವಕ ಹುತ್ತಿನಗದ್ದೆ ಉದಯ್ ಮಾತನಾಡಿ, ಫೋಟೋಗ್ರಫಿ ಹಲವು ಮಜಲುಗಳನ್ನು ದಾಟಿ ಶುಭ ಸಮಾರಂಭಗಳಲ್ಲಿ ಇಂದು ಬಹುಮುಖ್ಯ ಪಾತ್ರ ವಹಿಸಿದೆ ಎಂದರು. ಕುಶಾಲನಗರ ರೋಟರಿ ಅಸಿಸ್ಟೆಂಟ್ ಗವರ್ನರ್ ಎಂ.ಡಿ. ರಂಗಸ್ವಾಮಿ, ಕರವೇ ರಾಜ್ಯ ಸಂಚಾಲಕಿ ದೀಪಾ ಪೂಜಾರಿ, ಸಮಾಜ ಸೇವಕಿ ಅನುಪಮ ಮಾತನಾಡಿದರು.

 ಕೊಡಗು ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಆವರ್ತಿ ಆರ್ ಮಹದೇವಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಆರ್ಥಿಕ‌ ಸಹಕಾರಕ್ಕೆ‌ ಮನವಿ ಮಾಡಿದರು.

ಸಮಾಜ ಸೇವಕರಾದ ಹರಪಳ್ಳಿ ರವೀಂದ್ರ ಮತ್ತು ಅನುಪಮಾ ಆರ್ಯ ಅವರುಗಳನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಉಪಾಧ್ಯಕ್ಷ ರೋಷನ್, ಕಾರ್ಯದರ್ಶಿ ಲವಕುಮಾರ್,‌ ಖಜಾಂಚಿ ಪ್ರಕಾಶ್ ಕುಂಜಲಾನ, ಮಡಿಕೇರಿ ತಾಲೂಕು ಅಧ್ಯಕ್ಷ ಸುರೇಶ್ ಮಾವಾಡ್ಕರ್, ಕುಶಾಲನಗರ ತಾಲೂಕು ಅಧ್ಯಕ್ಷ ವಿಜಯಕುಮಾರ್, ದಕ್ಷಿಣ ಕೊಡಗು ಅಧ್ಯಕ್ಷ ಡಿ.ಸಿ.ರವೀಂದ್ರ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಸೋಲಮನ್ ಡೇವಿಡ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.

ಕುಶಾಲನಗರದಲ್ಲಿ ಕೊಡಗು ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕ್ಯಾಮರಾ ಕಾರ್ಯಾಗಾರವನ್ನು ಬೈಲುಕುಪ್ಪೆ ಬೋಧಿಸತ್ವ ಟ್ರಸ್ಟ್ ಸ್ಥಾಪಕ ಕರ್ಮ ರಿಂಫೊಚೆ ಉದ್ಘಾಟಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0