ಕುಶಾಲನಗರ;ರೌಡಿ ಸಾಗರ್ ಕೊಪ್ಪಳ ಜಿಲ್ಲೆಗೆ ಗಡಿಪಾರು
ಕುಶಾಲನಗರ; ರೌಡಿ ಆಸಾಮಿ ಸಾಗರ್ ಎಂ ಎಸ್ ತಂದೆ ಲೇಟ್ ಶಿವಣ್ಣ, ಪ್ರಾಯ 34 ವರ್ಷ, ಮನೆ ಬ್ರೋಕರ್ ಕೆಲಸ, ವಾಸ ಮುಳ್ಳುಸೋಗೆ ಗ್ರಾಮ, ಈತನ ಮೇಲೆ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಸುಮಾರು 11 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಸಾರ್ವಜನಿಕ ನೆಮ್ಮದಿ ಕಾನೂನು ಸುವ್ಯವಸ್ಥೆಯ ಹಿತ ದೃಷ್ಟಿಯಿಂದ ಕುಶಾಲನಗರ ಟೌನ್ ಪೊಲೀಸ್ ಠಾಣೆ ಪ್ರದೀಪ್ ಬಿ ಆರ್ ರವರ ವರದಿಯ ಮೇರೆಗೆ ಮಾನ್ಯ ಕೊಡಗು ಜಿಲ್ಲಾ ಎಸ್ ಪಿ ಕುಮಾರಿ ಬಿಂದುಮಣಿ ಮೇಡಂ ಅವರು ಸದರಿ ರೌಡಿ ಆಸಾಮಿಯನ್ನು ಕೊಡಗು ಜಿಲ್ಲೆಯಿಂದ ಕೊಪ್ಪಳ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಮೂಲಕ ಕೊಡಗು ಜಿಲ್ಲೆಯಲ್ಲಿ ಪುಡಿ ರೌಡಿಗಳಿಗೆ ಗಡಿಪಾರಿನ ಮೂಲಕ ಎಚ್ಚರಿಕೆಯನ್ನು ನೀಡಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಮಾನ್ಯ ಎಸ್ ಪಿ ಮೇಡಂ ರವರು ಮಾದರಿಯಾಗಿದ್ದಾರೆ.
What's Your Reaction?
Like
4
Dislike
0
Love
0
Funny
4
Angry
3
Sad
2
Wow
0
