ಕುಶಾಲನಗರ:ಸರಣಿ ಅಪಘಾತ, ವಾಹನಗಳು ಜಖಂ
ಕುಶಾಲನಗರ, ಜು.4: ಕುಶಾಲನಗರದ ಕೂಡಿಗೆ ರಸ್ತೆಯ ಸೋಮೇಶ್ವರ ದೇವಸ್ಥಾನದ ಎದುರುಬದಿ ಈ ಮಧ್ಯಾಹ್ನ ಸರಣಿ ವಾಹನ ಅಪಘಾತ ಸಂಭವಿಸಿದೆ.
ಕಾಂಕ್ರೆಟ್ ಕ್ಯಾಂಟರ್, ಆಲ್ಟೊ ಕಾರ್, ವ್ಯಾಗನಾರ್ ಕಾರ್ ಮತ್ತು ದ್ವಿಚಕ್ರ ಚಕ್ರ ವಾಹನ ಸೇರಿ ಅಪಘಾತ ಸಂಭವಿಸಿದೆ. ದ್ವಿಚಕ್ರ ವಾಹನ ಸವಾರನಿಗೆ ಗಾಯಗಳಾಗಿದ್ದು, ಸ್ಥಳಕ್ಕೆ ಕುಶಾಲನಗರ ಟ್ರಾಫಿಕ್ ಪೊಲೀಸರು ಆಗಮಿಸಿದ್ದಾರೆ. ಈ ಜಾಗದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ವಾಹನ ಅಪಘಾತ ಸಂಭವಿಸುತ್ತಿದ್ದು, ಈ ನಿಟ್ಟಿನಲ್ಲಿ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಈ ಜಾಗದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಸಂಬಂಧಪಟ್ಟವರನ್ನು ಆಗ್ರಹಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
1
Wow
0

