ಕುಶಾಲನಗರ:ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ
admincoorgdaily

ಮಡಿಕೇರಿ, ಜೂ 17: ಕುಶಾಲನಗರದ ಗೊಂದಿಬಸವನಹಳ್ಳಿ ಗ್ರಾಮದಲ್ಲಿ ವಿವಾಹಿತ ಮಹಿಳೆ ನೇಣಿಗೆ ಶರಣಾದ ಘಟನೆ ನಡೆದಿದೆ. ಗೊಂದಿಬಸವನಹಳ್ಳಿ ಸುಬ್ರಮಣ್ಯ ಕಾಫಿ ವರ್ಕ್ಸ್ ಬಳಿ ನಿವಾಸಿ ಮಹೇಶ್ ಎಂಬವರ ಪತ್ನಿ ತೇಜ (27) ಮೃತ ಮಹಿಳೆ.
ಮಂಗಳವಾರ ರಾತ್ರಿ ಪತಿ ಮಹೇಶ್ ಹಾಲು ತರಲು ಅಂಗಡಿಗೆ ತೆರಳಿದ ಸಂದರ್ಭ ತೇಜ ಸ್ನಾನಗೃಹ ಛಾವಣಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಿಳೆಗೆ ಇಬ್ಬರು ಪುತ್ರಿಯರಿದ್ದಾರೆ. ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.