ಭೂ ಗುತ್ತಿಗೆ ಕಾನೂನು ಬಡಜನರ ನಿವೇಶ, ಮನೆಯ ಕನಸಿಗೆ ಕೊಡಲಿ ಪೆಟ್ಟು ನೀಡಲಿದೆ: ಸಿ.ಧರ್ಮರಾಜ್ ಸಿ.ಪಿ.ಐ. 4ನೇಕೊಡಗು ಜಿಲ್ಲಾ ಸಮ್ಮೇಳನ

ಭೂ ಗುತ್ತಿಗೆ  ಕಾನೂನು ಬಡಜನರ ನಿವೇಶ, ಮನೆಯ ಕನಸಿಗೆ ಕೊಡಲಿ ಪೆಟ್ಟು ನೀಡಲಿದೆ: ಸಿ.ಧರ್ಮರಾಜ್  ಸಿ.ಪಿ.ಐ. 4ನೇಕೊಡಗು ಜಿಲ್ಲಾ ಸಮ್ಮೇಳನ

ಸಿದ್ದಾಪುರ:- ಕೊಡಗಿನ ತೋಟದ ಲೈನ್ ಮನೆಗಳಲ್ಲಿ,ಬಾಡಿಗೆ ಮನೆಗಳಲ್ಲಿ, ನದಿ ತೀರಗಳಲ್ಲಿ,ನೂರಾರು ಕಾರ್ಮಿಕರು ನಿವೇಶನ ಇಲ್ಲದೆ ವಾಸಿಸುತ್ತಿದ್ದು ನಿವೇಶನಕ್ಕಾಗಿ ಸರ್ಕಾರಕ್ಕೆ ಅರ್ಜಿಸಲ್ಲಿಸಿ ಜನಪ್ರತಿನಿಧಿಗಳ ಭರವಸೆಯಲ್ಲಿ ಕಾಲ ಕಳೆಯುತ್ತಿದರೆ ಇತ್ತ ಸರ್ಕಾರಿ ಭೂಮಿಯನ್ನು ಗುತ್ತಿಗೆ ನೀಡುವ ಮೂಲಕ ಬಡಜನರ ನಿವೇಶನ, ಮನೆಯ ಕನಸಿಗೆ ಕೊಡಲಿ ಪೆಟ್ಟು ನೀಡಲಿದೆ ಎಂದು ಹಾಸನ ಜಿಲ್ಲಾ ಕಾರ್ಯದರ್ಶಿ ಸಿ.ಧರ್ಮರಾಜ್ ಅಭಿಪ್ರಾಯ ಪಟ್ಟರು.

ಸಿದ್ದಾಪುರದ ಗುಹ್ಯ ಅಗಸ್ತ್ಯೇಶ್ವರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷದ 4ನೇ ಕೊಡಗು ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಬಿಸ್ಕತ್ತು ಸೇರಿದಂತೆ ಬಡವರ ಅನ್ನಕ್ಕೆ ಜಿ.ಎಸ್.ಟಿ ವಿಧಿಸುವ ಮೂಲಕ ಸರ್ಕಾರ ಬಡವ ವಿರೋಧಿಯಾಗಿದೆ ಎಂದು ಆರೋಪಿಸಿದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಸುನೀಲ್ ಮಾತನಾಡಿ ಇಂದೀಗೂ ತೋಟದ ಲೈನ್ ಮನೆಯಲ್ಲಿ,ನದಿ ತೀರದಲ್ಲಿ ವಾಸಿಸುತ್ತಿದ್ದು ಇಂದಿಗು ನಿವೇಶನ ವಂಚಿತರಾಗಿದ್ದು ಸರ್ಕಾರ ಬದಲಾದರೂ ಇವರ ಮನೆ ಹೊಂದುವ ಕನಸಾಗಿಯೇ ಉಳಿದಿದೆ. ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ತಾರಕಕ್ಕೆ ಏರಿದ್ದು 2ವರ್ಷ ಕಳೆದರು ಶಾಸಕರು ಚುನಾವಣೆಯಲ್ಲಿ ನೀಡಿದ ಭರವಸೆ ಈಡೇರಿಸುವಲ್ಲಿ ವಿಫಲರಾಗಿದ್ದು ಮುಂದಿನ ದಿನಗಳಲ್ಲಿ ಇವರು ಜನ ವಿರೋಧಿ ನೀತಿ ಖಂಡಿಸಿ ಪಕ್ಷದ ವತಿಯಿಂದ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದರು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ದಲಿತ ರೈಟ್ಸ್ ಮೂಮೆಂಟ್ ನ ರಾಜ್ಯ ಸಮೀತಿ ಸದಸ್ಯ ರಮೇಶ್ ಮಾಯಮುಡಿ ಮಾತನಾಡಿ ಮೈಕ್ರೋ ಫೈನಾನ್ಸ್ ಹಾವಳಿಯಿಂದ ಬಡ ಜನ ಬೇಸತ್ತಿದ್ದು ಸರ್ಕಾರ ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೆ ಸಂದರ್ಭದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷದ ನೂತನ ಜಿಲ್ಲಾ ಕಾರ್ಯದರ್ಶಿಯಾಗಿ ರಫೀಕ್ ನವಲಗುಂದ, ಸಹಕಾರ್ಯದರ್ಶಿಯಾಗಿ ಎನ್. ಮಣಿ,ಹಾಗೂ ಜೆ.ಆರ್. ಸುರೇಶ್ ಖಜಾಂಚಿ ಯಾಗಿ ಕೆ ಸೀತಾರಾಂ, ಹಾಗೂ ಹದಿನೇಳು ಸದಸ್ಯರು ಜಿಲ್ಲಾ ಸಮಿತಿ ಆಯ್ಕೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಪುಷ್ಪ ,ಪ್ರಕಾಶ್,ಮಣಿ, ಮಂಜುಳಾ,ಸೀತೆ,ಸಿದ್ದ, ಸೇರಿದಂತೆ ವಿವಿಧ ತಾಲ್ಲೂಕು ಸಮಿತಿಯಿಂದ ಆಯ್ಕೆಯಾದ ಪ್ರತಿನಿಧಿಗಳು ಹಾಜರಿದ್ದರು.