ಮಡಿಕೇರಿ ದಸರಾದಲ್ಲಿ ವಕೀಲ ಯಕ್ಷಿತ್ ಮೇಲೆ ಹಲ್ಲೆ ಆರೋಪ: ಪೋಲೀಸರ ವಿರುದ್ಧ ಬೆಂಗಳೂರು ವಕೀಲರ ಸಂಘ ಆಕ್ರೋಶ

ಮಡಿಕೇರಿ ದಸರಾದಲ್ಲಿ ವಕೀಲ ಯಕ್ಷಿತ್ ಮೇಲೆ ಹಲ್ಲೆ ಆರೋಪ: ಪೋಲೀಸರ ವಿರುದ್ಧ ಬೆಂಗಳೂರು ವಕೀಲರ ಸಂಘ ಆಕ್ರೋಶ

ಬೆಂಗಳೂರು:ಬೆಂಗಳೂರು ವಕೀಲರ ಸಂಘದಿಂದ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡಿಸಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಭಾ ರೆಡ್ಡಿ ಮಾತನಾಡಿ ಮಡಿಕೇರಿಯಲ್ಲಿ ದಸರಾ ದಿನದಂದು ವಕೀಲ ಯಕ್ಷಿತ್ ಮೇಲೆ ಪೊಲೀಸರು ಹಲ್ಲೆ ನಡೆಸಿ ಸುಳ್ಳು ದೂರನ್ನು ದಾಖಲಿಸಿದ DYSP ಸೂರಜ್ ಪಿಎಸ್ಐ ರಾಘವೇಂದ್ರ ಮತ್ತು ಪೊಲೀಸ್ ಪೇದೆಗಳ ಮೇಲೆ ತೀವ್ರವಾಗಿ ಖಂಡಿಸಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ದಸರಾ ಮಂಟಪಕ್ಕೆ ಪ್ರಥಮ ಬಹುಮಾನ ಪಡೆದ ಸಂಧರ್ಭ ಪ್ರಥಮ ಬಹುಮಾನ ಪಡೆದ ದಸರಾ ಮಂಟಪದ ಕೋಟೆ ಮಾರಿಯಮ್ಮ ದೇವಾಲಯದ ಸಮಿತಿಯ ಸದಸ್ಯ ವಕೀಲ ಯಕ್ಷಿತ್ ವೇದಿಕೆಯಲ್ಲಿ ಇರಬೇಕಾದರೆ ಪೊಲೀಸರು ಏಕಾಏಕಿಯಾಗಿ ಬಂದು ವಕೀಲರನ್ನು ಎಳೆದು ವೇದಿಕೆಯಿಂದ ಕೆಳಗೆ ಬೀಳಿಸಿ, ಹಲ್ಲೆ ನಡೆಸಿ ಕರ್ತವ್ಯ ನಿಷ್ಠೆ ಮರೆತು ಕಾನೂನು ಬಾಹಿರವಾಗಿ ಮಾನವೀಯತೆ ಇಲ್ಲದವರ ಹಾಗೆ ವಕೀಲರ ಮೇಲೆ ಹಲ್ಲೆ ಮಾಡಿರುತ್ತಾರೆ.

ಮಡಿಕೇರಿ ನಗರ ಪೊಲೀಸ್ ಠಾಣೆಯ ಒಳಗೆ ಪೊಲೀಸರು ಮನಬಂದಂತೆ ಹಲ್ಲೆ ನಡಿಸಿದವರ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು. ಈ ಪೋಲೀಸರ ದೌರ್ಜನ್ಯ ವಿರುದ್ಧ ಬೆಂಗಳೂರು ವಕೀಲರ ಸಂಘ ಮಡಿಕೇರಿಗೆ ತೆರಳಿ ಮಡಿಕೇರಿ ನಗರ ಪೊಲೀಸ್ ಠಾಣೆ ಹಾಗು ಘಟನೆಗೆ ಸಂಬಂದಿಸಿದ ಪೋಲೀಸರ ವಿರುದ್ಧ ಮಡಿಕೇರಿಯ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ದಾಖಲಿಸುವುದಾಗಿ ಹೇಳಿದರು.

 ಬೆಂಗಳೂರು ವಕೀಲರ ಸಂಘದ ಪ್ರದಾನ ಕಾರ್ಯದರ್ಶಿ ಪ್ರವೀಣ್ ಗೌಡ, ಉಪಾಧ್ಯಕ್ಷರಾದ ಗಿರೀಶ್ ಕುಮಾರ್, ಯಕ್ಷಿತ್ ಕೊತ್ತೂಳಿ, ಸಂಘದ ಪದಾಧಿಕಾರಿಗಳು ಮಾದ್ಯಮಕ್ಕೆ ಘಟನೆಯ ಬಗ್ಗೆ ವರದಿ ನೀಡಿದರು.