Kodagu

ಮಲತ್ಯಾಜ್ಯ ವಿಲೇವಾರಿ ವಾಹನಗಳ ಲೋಕಾರ್ಪಣೆಗೊಳಿಸಿದ ಶಾಸಕ ಎ.ಎಸ್ ಪೊನ್ನಣ್ಣ

admincoorgdaily

ಮಡಿಕೇರಿ:ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ, ಸರಕಾರದಿಂದ ದೊರೆತ ಸುಮಾರು ₹ 30 ಲಕ್ಷ ಮೌಲ್ಯದ, 2 ಮಲತ್ಯಾಜ್ಯ ವಿಲೇವಾರಿ ಸಂಚಾರಿ ಘಟಕಗಳ ಲೋಕಾರ್ಪಣೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನೆರವೇರಿಸಿದರು.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ನಾಪೋಕ್ಲು ಹಾಗೂ ಪೊನ್ನಂಪೇಟೆಯಲ್ಲಿ ಮಾನ್ಯ ಶಾಸಕರು ಸದ್ರಿ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದರ ನಿರ್ವಹಣೆಯನ್ನು ನಾಪೋಕ್ಲು ಹಾಗೂ ಕುಟ್ಟ ಪಂಚಾಯಿತಿಗಳು ವಹಿಸಿಕೊಳ್ಳುತ್ತಿದೆ. ಮನೆಗಳಲ್ಲಿ ತುಂಬಿದ ಸೆಪ್ಟಿಕ್ ಟ್ಯಾಂಕ್ ಹಾಗೂ ಇಂಗು ಗುಂಡಿಗಳ ಮಲ ತ್ಯಾಜ್ಯವನ್ನು, ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ‘ಮಲ ತ್ಯಾಜ್ಯ ನಿರ್ವಾಹಣಾ ಘಟಕ’ ಸಹಕಾರಿಯಾಗಲಿದ್ದು ಇದರ ಸದುಪಯೋಗವನ್ನು ಪಂಚಾಯತ್ ಮೂಲಕ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಮಾನ್ಯ ಶಾಸಕರು ಹೇಳಿದರು. ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ನಾಪೋಕ್ಲು ಹಾಗೂ ಕುಟ್ಟ ಪಂಚಾಯಿತಿಯ ಅಧ್ಯಕ್ಷರು ಉಪಸ್ಥಿತರಿದ್ದರು.