ರಾಜ್ಯದ ಕ್ರೀಡಾ ಪ್ರಾಧಿಕಾರದ ನೂತನ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ ಅವರಿಗೆ ಅಭಿನಂದಿಸಿದ ಶಾಸಕ ಎ.ಎಸ್ ಪೊನ್ನಣ್ಣ

ರಾಜ್ಯದ ಕ್ರೀಡಾ ಪ್ರಾಧಿಕಾರದ ನೂತನ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ ಅವರಿಗೆ ಅಭಿನಂದಿಸಿದ ಶಾಸಕ ಎ.ಎಸ್ ಪೊನ್ನಣ್ಣ

ಪೊನ್ನಂಪೇಟೆ: ತಾಲೂಕಿನ ಮಾಯಮುಡಿಯಲ್ಲಿ ಆಯೋಜನೆಗೊಂಡ ಅರುಣ್ ಮಾಚಯ್ಯ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.

ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಹಿರಿಯ ಕಾಂಗ್ರೆಸ್ ನಾಯಕರಾದ ಚೆಪ್ಪುಡೀರ ಅರುಣ್ ಮಾಚಯ್ಯ ರವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

ಅರುಣ್ ಮಾಚಯ್ಯನವರನ್ನು ಸನ್ಮಾನಿಸಿ, ಶುಭ ಕೋರಿದ ಶಾಸಕರು, ಸ್ವತಹ ಕ್ರೀಡಾಪಟು ಹಾಗೂ ಪ್ರಬುದ್ಧ ರಾಜಕಾರಣಿಯಾದ ಅರುಣ್ ಮಾಚಯ್ಯನವರಿಗೆ ಈ ಹುದ್ದೆ ಒಲಿದಿದ್ದು ವಿಶೇಷವಾಗಿ ಕೊಡಗಿಗೆ ವರದಾನವಾಗಲಿದೆ. ಇವರ ಅವಧಿಯಲ್ಲಿ ಕ್ರೀಡಾ ಪ್ರಾಧಿಕಾರ ವತಿಯಿಂದ ಕೊಡಗಿಗೆ ಮತ್ತಷ್ಟು ಅನುಕೂಲ ಆಗುವುದರೊಂದಿಗೆ ಇಲ್ಲಿನ ಕ್ರೀಡಾ ಪ್ರತಿಭೆಗಳಿಗೆ ಬಲಬಂದಂತಾಗಿದೆ. ತಮ್ಮ ನೂತನ ಜವಾಬ್ದಾರಿಯಲ್ಲಿ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಕಾಳಿಮಾಡ ಪ್ರಶಾಂತ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಬಾನಂಡ ಪೃಥ್ವಿ,ಜಿಮಿ ಅಣ್ಣಯ್ಯ, ಡಿಸಿಸಿ ಸದಸ್ಯರು, ಎಲ್ಲಾ ವಲಯ, ಬ್ಲಾಕ್ ಅಧ್ಯಕ್ಷರುಗಳು, ಪದಾಧಿಕಾರಿಗಳು, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.