ಶಾಸಕ ಎ.ಎಸ್ ಪೊನ್ನಣ್ಣ ಪ್ರಯತ್ನ :ಗಯಾನದಲ್ಲಿ ಮೃತಪಟ್ಟ ಕೊಡಗಿನ ಮದೆನಾಡುವಿನ ಗಿರೀಶ್ ಮೃತದೇಹ ತಾಯ್ನಾಡಿಗೆ ತರಲು ಸರ್ಕಾರದಿಂದ ಹಣಕಾಸಿನ ನೆರವು
ಮಡಿಕೇರಿ:ಶಾಸಕ ಪೊನ್ನಣ್ಣ ರವರ ಪ್ರಯತ್ನದಿಂದ, ದಕ್ಷಿಣ ಅಮೆರಿಕದ ಗಯಾನ ನಿಧನರಾದ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮದೆನಾಡು ಗ್ರಾಮದ, ಗಿರೀಶ್ ಪಾಲೆ ಬಾಬು ರವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ರಾಜ್ಯ ಸರ್ಕಾರದಿಂದ ಹಣಕಾಸಿನ ನೆರವು ನೀಡಲಾಗಿದೆ. ಇತ್ತೀಚೆಗೆ ಅಮೆರಿಕದ ಗಯಾನದಲ್ಲಿ ಅನಾರೋಗ್ಯದಿಂದ ಮೃತಪಟ್ಟ ಗಿರೀಶ್ ರವರ ಮೃತ ದೇಹವನ್ನು ಭಾರತಕ್ಕೆ ತರಲು ಅವರ ಬಡ ಕುಟುಂಬಕ್ಕೆ ಸಾಧ್ಯವಾಗದನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಗಿರೀಶ್ ಅವರ ಸ್ನೇಹಿತರು ಮಾಹಿತಿ ನೀಡಿದ್ದರು.ತಕ್ಷಣದ ಸ್ಪಂದಿಸಿದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ರವರು, ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರಲು ಸಹಕರಿಸುವಂತೆ ಬಂದ ಮನವಿಗೆ ಕೂಡಲೇ ಸ್ಪಂದಿಸಿ ಸರಕಾರ ಹಾಗೂ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ, ಅದಕ್ಕೆ ತಗಲುವ ವೆಚ್ಚದಲ್ಲಿ ₹ 3,60,000 ವನ್ನು ಸರಕಾರವೇ ಭರಿಸುವ ಆದೇಶವನ್ನು ಕೊಡಿಸಿರುತ್ತಾರೆ. ಸರಕಾರ ಹಾಗೂ ಶಾಸಕರಾದ ಶ್ರೀ ಪೊನ್ನಣ್ಣ ರವರಿಗೆ ಗ್ರಾಮಸ್ಥರು ಧನ್ಯವಾದಗಳು ಅರ್ಪಿಸಿದ್ದಾರೆ.