ಚೆಯ್ಯಂಡಾಣೆಯಲ್ಲಿರುವ ಸ್ವಾಮಿ ಕೊರಗಜ್ಜ ಸ್ಥಾನದ ಅಭಿವೃದ್ಧಿಗೆ ಒಂದು ಲಕ್ಷ ರೂ ನೀಡಿದ ಶಾಸಕ‌ ಎಎಸ್ ಪೊನ್ನಣ್ಣ

ಚೆಯ್ಯಂಡಾಣೆಯಲ್ಲಿರುವ ಸ್ವಾಮಿ ಕೊರಗಜ್ಜ ಸ್ಥಾನದ ಅಭಿವೃದ್ಧಿಗೆ ಒಂದು ಲಕ್ಷ ರೂ ನೀಡಿದ ಶಾಸಕ‌ ಎಎಸ್ ಪೊನ್ನಣ್ಣ

ವಿರಾಜಪೇಟೆ; ಅತ್ಯಂತ ಕಾರಣಿಕ ಹೊಂದಿರುವ ಹಾಗೂ ನಾಡಿನ ಬಹುತೇಕರು ಆರಾಧಿಸುವ ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಗೆ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿದರು.

ಮಡಿಕೇರಿ ತಾಲೂಕು ಚೇಲಾವರ ಗ್ರಾಮ, ಚೆಯ್ಯಂಡಾಣೆಯಲ್ಲಿರುವ, ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಮಾನ್ಯ ಶಾಸಕರು, ಸ್ವಾಮಿ ಕೊರಗಜ್ಜನ ಆಶೀರ್ವಾದ ನಾಡಿನ ಎಲ್ಲರ ಮೇಲಿರಲಿ ಎಂದು ಪ್ರಾರ್ಥಿಸಿದರು.

 ಕೊರಗಜ್ಜ ಸ್ಥಾನಕ್ಕೆ ವೈಯುಕ್ತಿಕ ಧನ ಸಹಾಯ ಮಾಡಿದ ಶಾಸಕರು: ಈ ಸಂದರ್ಭದಲ್ಲಿ ಕೊರಗಜ್ಜ ಸ್ಥಾನದ ಅಭಿವೃದ್ಧಿಗೆ ಸ್ಥಳಿಯರು ಬೇಡಿಕೆ ಸಲ್ಲಿಸಿದ ಸಂದರ್ಭ, ಶಾಸಕರು ತಮ್ಮ ವೈಯುಕ್ತಿಕ‌ಕೊಡುಗೆಯಾಗಿ ₹1 ಲಕ್ಷ ನೀಡಿದರಲ್ಲದೆ ಸರಕಾರದಿಂದ ಅನುದಾನ ಕೊಡಿಸುವ ಭರವಸೆ ನೀಡಿದರು.

 ಕೊರಗಜ್ಜ ಸ್ಥಾನಕ್ಕೆ ತೆರಳುವ ದಾರಿ ಮಧ್ಯ ಶಾಸಕರ ಅನುದಾನದಲ್ಲಿ ನಿರ್ಮಾಣ ಆಗುತ್ತಿರುವ ಚೇಲಾವರ ಸೇತುವೆ ಕಾಮಗಾರಿಯನ್ನು ವೀಕ್ಷಿಸಿದ ಶಾಸಕರು, ಸೇತುವೆ ಪೂರ್ಣಗೊಳಿಸುವ ಕುರಿತು ಹಾಗೂ ಸ್ಥಳೀಯರ ಅಭಿಪ್ರಾಯದ ಬಗ್ಗೆ ಮಾಹಿತಿ ಪಡೆದರು.

 ಐನ್ ಮನೆಯವರಿಂದ ಶಾಸಕರಿಗೆ ಸನ್ಮಾನ; ಈ ಹಿಂದೆ ಮಾನ್ಯ ಶಾಸಕರು ಕೋಳಿಮಾಡು ಇಲೆತೇರಿ ಐನ್ ಮನೆ ಅಭಿವೃದ್ಧಿಗೆ ಅನುದಾನ ಒದಗಿಸಿದ್ದನ್ನು ಸ್ಮರಿಸಿಕೊಂಡು, ಸದ್ರಿ ಐನ್ ಮನೆಯ ಪ್ರಮುಖರು ಇಂದು ಚೇಲಾವರ ಗ್ರಾಮಕ್ಕೆ ಶಾಸಕರು ಆಗಮಿಸಿರುವುದನ್ನು ತಿಳಿದು, ಮಾನ್ಯ ಶಾಸಕರಿಗೆ ಕೃತಜ್ಞತಾ ಪೂರ್ವಕವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ವಲಯ ಅಧ್ಯಕ್ಷರು ಕೋಡಿರ ವಿನೋದ್, ಪ್ರಕಾಶ್, ಮಣಿ ಅಯ್ಯಮ್ಮ, ,ಬೂತ್ ಅಧ್ಯಕ್ಷರು ಸೀತಾ ರಾಮ, ಡಾಲಿ ಸುಬ್ರಮಣಿ, ಮೀನಾ, ಖುಷಿ ಮಾಚಮ್ಮ ಹಮದ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.