ನಾಲ್ಕೇರಿ ಗ್ರಾಮದಲ್ಲಿ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಎಎಸ್ ಪೊನ್ನಣ್ಣ

Mar 30, 2026 - 12:15
 0  264
ನಾಲ್ಕೇರಿ ಗ್ರಾಮದಲ್ಲಿ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಎಎಸ್ ಪೊನ್ನಣ್ಣ

ಪೊನ್ನಂಪೇಟೆ; ತಾಲೂಕಿನ ನಾಲ್ಕೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಾಂಕ್ರೀಟ್ ರಸ್ತೆಯ ಲೋಕಾರ್ಪಣೆಯನ್ನು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನೆರವೇರಿಸಿದರು. ₹ 15 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ನೂತನ ರಸ್ತೆಯನ್ನು ಪರಿಶೀಲಿಸಿರು.

ಬಳಿಕ ರಸ್ತೆ ಉದ್ಘಾಟಿಸಿ ಶುಭ ಕೋರಿದ ಶಾಸಕರು, ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಅನುದಾನ ಒದಗಿಸುತ್ತಿದ್ದು ಅಗತ್ಯ ಕನಸಾರ ಕ್ಷೇತ್ರಾದ್ಯಂತ ಅಭಿವೃದ್ಧಿ ಕ್ರಮಗಾರಿಕೆಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷರು ಮಿದೇರಿರ ನವೀನ್, ಕೆ ಬಾಡಗ ವಲಯ ಅಧ್ಯಕ್ಷರು ರವಿ, ನಾಲ್ಕೇರಿ ವಲಯ ಅಧ್ಯಕ್ಷರು ಕಟ್ಟಿ ಕಾರ್ಯಪ್ಪ, ಪಾಲ್ವಿನ್ ಪೂಣಚ್ಚ, ನವೀನ್ ಅಯ್ಯಪ್ಪ, ಅಜ್ಜಿಕುಟ್ಟಿರ ಪೊನ್ನು ಗಿರೀಶ್, ಪಮ್ಮು, ಮಚ್ಚಮಾಡ ಮನು, ಸಿದ್ದು ನಾಚಪ್ಪ, ಮನು, ಮಧು, ನಿಲ್ಲು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0