ಹಾತೂರಿನಲ್ಲಿ ಕೊಡವ ಸವಿತಾ ಸಮಾಜದ ಕ್ರಿಕೆಟ್ ಕಳಿಕೂಟಕ್ಕೆ ಚಾಲನೆ ನೀಡಿದ ಶಾಸಕ ಎಎಸ್ ಪೊನ್ನಣ್ಣ
ಪೊನ್ನಂಪೇಟೆ;ಕೊಡಗು ಕೊಡವ ಸವಿತಾ ಸಮಾಜದವರು ಆಯೋಜಿಸಿದ, ಕ್ರಿಕೆಟ್ ಕಳಿಕೂಟ - 2026ರ ಉದ್ಘಾಟಕರಾಗಿ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.
ಪೊನ್ನಂಪೇಟೆ ತಾಲ್ಲೂಕು ಹಾತೂರಿನಲ್ಲಿರುವ ಜಿ ಎಮ್ ಪಿ ಶಾಲಾ ಮೈದಾನದಲ್ಲಿ ಈ ಕ್ರಿಕೆಟ್ ಪಂದ್ಯಾಟವು ಆಯೋಜನೆಗೊಂಡಿದ್ದು, ಪಂದ್ಯಾಟವನ್ನು ಉದ್ಘಾಟಿಸುತ್ತಾ ಶುಭಕೋರಿದ ಮಾನ್ಯ ಶಾಸಕರು, ಭಾಗವಹಿಸಿದ ಎಲ್ಲಾ ತಂಡಗಳು ತಮ್ಮ 100% ಪ್ರತಿಷಿತ ಪ್ರಯತ್ನದೊಂದಿಗೆ ಯಶಸ್ಸು ಕಾಣುವಂತಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸವಿತಾ ಸಮಾಜದ ಅಧ್ಯಕ್ಷರು ತಾಪನೇರ ದಿನೇಶ್, ವಲಯ ಅಧ್ಯಕ್ಷರು ಕೊಕ್ಕಂಡ ರೋಷನ್, ಬಿ. ಶೆಟ್ಟಿಗೇರಿ ಪಂಚಾಯಿತಿ ಮಾಜಿ ಅಧ್ಯಕ್ಷರು ಕೊಲ್ಲಿರ ಬೋಪಣ್ಣ, ಡಾ.ಸುಭಾಸ್ ನಾಣಯ್ಯ, ಹಾಗೂ ಪ್ತಮುಖರು ಉಪಸ್ಥಿತರಿದ್ದರು.