ಮಾಕುಟ್ಟ,ಪೆರುಂಬಾಡಿ ಭಾಗದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಶಾಸಕ ಎಎಸ್ ಪೊನ್ನಣ್ಣ

Jan 10, 2026 - 20:27
 0  459
ಮಾಕುಟ್ಟ,ಪೆರುಂಬಾಡಿ ಭಾಗದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಶಾಸಕ ಎಎಸ್ ಪೊನ್ನಣ್ಣ

ವಿರಾಜಪೇಟೆ:ಕೇರಳ ರಾಜ್ಯಕ್ಕೆ ತೆರಳುವ, ಮುಖ್ಯ ರಸ್ತೆಯ ವಿವಿಧ ಭಾಗಗಳಲ್ಲಿ ಭೂಮಿ ಪೂಜೆ ಹಾಗೂ ಉದ್ಘಾಟನೆ ಕಾರ್ಯಕ್ರಮವನ್ನು, ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನೆರವೇರಿಸಿದರು.

   ಮಾಕುಟ್ಟ ಚೆಕ್ಪೋಸ್ಟ್, ವಾಟೆಕೊಲ್ಲಿ ಹಾಗೂ ಪೆರುಂಬಾಡಿ ಬಳಿ ಭೂಮಿ ಪೂಜೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕರು, ವಾಹನ ದಟ್ಟನೆ ಹೆಚ್ಚಾಗಿ ಇರುವ ಈ ರಸ್ತೆಯ ಅಭಿವೃದ್ಧಿ ತನ್ನ ಪ್ರಥಮ ಆದ್ಯತೆಯಾಗಿದ್ದು,ಕಳೆದ ವರ್ಷದ ತೀವ್ರ ಮಳೆಯಿಂದ ಈ ರಸ್ತೆ ಹಾನಿಗೀಡಾಗಿದ್ದನ್ನು ಪರಿಗಣಿಸಿ, ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಲು ಈ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಹೇಳಿದರು.

   ಒಟ್ಟು ₹ 25 ಕೋಟಿ ಅನುದಾನದ ಈ ಕಾಮಗಾರಿ ಪೈಕಿ, ₹ 2 ಕೋಟಿ 80 ಲಕ್ಷದ ಮುಕ್ತಾಯಗೊಂಡ ಕಾಮಗಾರಿಯ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಧರ್ಮಜ ಉತ್ತಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಟ್ಟಡ ರಂಜಿ ಪೂಣಚ್ಚ, ಮಾಜಿ ಪುರಾಸಭೆ ಅಧ್ಯಕ್ಷರು ದೇಚಮ್ಮ ಕಾಳಪ್ಪ, ಉಪಾಧ್ಯಕ್ಷರು ಫಸಿಯಾ ತಬ್ಸುಂ, ಮಾಜಿ ಸದಸ್ಯರು ರಾಜೇಶ್ ಪದ್ಮನಾಭ, ರಾಫಿ, ತಾಲೂಕು ಪ್ರಚಾರ ಸಮಿತಿಯ ಅಧ್ಯಕ್ಷರು ಮತೀನ್, ಅತಿಫ್ ಮನ್ನ, ರಜಿನಿಕಾಂತ್, ಪೃಥ್ವಿನಾಥ್, ಸ್ಥಾಯಿ ಸಮಿತಿಯ ಅಧ್ಯಕ್ಷರು ಜಲಿಲ್, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷರು ಹನೀಫ್, ತಾಲೂಕು ಅಲ್ಪಸಂಖ್ಯಾತರ ಅಧ್ಯಕ್ಷರು ರಫೀಕ್, ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಕಾಳಿಮಾಡ ಪ್ರಶಾಂತ್, ಪಕ್ಷದ ಪ್ರಮುಖರಾದ ನಾಸಿರ್, ಜಗತ್, ಜಗದೀಶ್, ತಿಮ್ಮಯ್ಯ, ಮರ್ವಿನ್ ಲೋಬೊ, ಮೇಲ್ರಯ್ ಲೋಬೊ, ಪರದಂಡ ವಿಠಲ,ಬಟ್ಟಕಳಂಡ ರಾಜ, ರಾಜೇಶ್, ಶಶಿಧರನ್, ಮಂಜು ದೇವಯ್ಯ, ಅನಿಲ್, ಚೆಕು, ಹರೀಶ್, ವರ್ಗಿಸ್, ಅರ್ಜಿ ಪಂಚಾಯಿತಿಅಧ್ಯಕ್ಷರು ಫಾತಿಮಾ, ಜಾಫರ್, ಸಿರಾಜ್, ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರು ಪಟ್ಟಡ ರಕ್ಷಿತ್, ಯುವ ಬ್ಲಾಕ್ ಅಧ್ಯಕ್ಷರು ಶಬೀರ್ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0