ಅಂಬಟ್ಟಿ ಮಖಾಂ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ
ವಿರಾಜಪೇಟೆ; ಅಂಬಟ್ಟಿ ಮಖಾಂ ಉರೂಸ್ ಕಾರ್ಯಕ್ರಮದಲ್ಲಿ, ಮುಖ್ಯ ಅತಿಥಿಯಾಗಿ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.
ಪ್ರತಿ ವರ್ಷದಂತೆ, ಕೆಲವು ದಿನಗಳು ನಡೆಯುವ ಈ ಉರುಸ್ ಸಮಾರಂಭದ ಮಹತ್ವದ ಬಗ್ಗೆ ಮಾತನಾಡಿದ ಶಾಸಕರು, ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ ಹಾಗೂ ಭಕ್ತರ ಒಳಿತಿಗಾಗಿ ನಡೆಯುವ ಇಂತಹ ಸಮಾರಂಭಗಳು, ನಾಡಿಗೆ ಹಾಗೂ ನಾಡಿನ ಜನತೆಗೆ ಸುಭಿಕ್ಷ ತರಲಿ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಧರ್ಮಗುರುಗಳು, ಜಿಲ್ಲಾ ಅಲ್ಪಸಂಖ್ಯಾತರ ಘಟದ ಅಧ್ಯಕ್ಷರು ಹನೀಫ್, ತಾಲೂಕು ಪ್ರಚಾರ ಸಮಿತಿಯ ಅಧ್ಯಕ್ಷರು ಮತೀನ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.