08 ಲಕ್ಷ ವೆಚ್ಚದ ಶಸ್ತ್ರಚಿಕಿತ್ಸೆ ಉಚಿತವಾಗಿ ಮಾಡಿಸಿದ ಶಾಸಕ ಎಎಸ್ ಪೊನ್ನಣ್ಣ: ಕೃತಜ್ಞತೆ ಸಲ್ಲಿಸಿದ ಕುಟಂಬಸ್ಥರು

08 ಲಕ್ಷ ವೆಚ್ಚದ ಶಸ್ತ್ರಚಿಕಿತ್ಸೆ ಉಚಿತವಾಗಿ ಮಾಡಿಸಿದ ಶಾಸಕ ಎಎಸ್ ಪೊನ್ನಣ್ಣ:  ಕೃತಜ್ಞತೆ ಸಲ್ಲಿಸಿದ ಕುಟಂಬಸ್ಥರು

ವಿರಾಜಪೇಟೆ: ಇತ್ತೀಚೆಗೆ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಸಮೀಪದ ಚೆನ್ನಯ್ಯನಕೋಟೆ ನಿವಾಸಿ ಅಣ್ಣಪ್ಪ ಎಂಬವರಿಗೆ ಗಂಟಲಿನಲ್ಲಿ ಊತ ಕಂಡು ಬಂದ ಹಿನ್ನೆಲೆಯಲ್ಲಿ, ಅವರಿಗೆ ಚಿಕಿತ್ಸೆ ನೀಡಲು ಮೈಸೂರಿನ ಖಾಸಗಿ ಆಸ್ಪತ್ರೆಗೆ ಪರೀಶಿಲನೆಗೆ ಕರೆದುಕೊಂಡು ಹೋದಾಗ, ಅಣ್ಣಪ್ಪ ಅವರ ಗಂಟಲಿನಲ್ಲಿ ಕ್ಯಾನ್ಸರ್ ಗೆಡ್ಡೆ ಬೆಳದ್ದಿದ್ದು ಶಸ್ತ್ರಚಿಕಿತ್ಸೆ ಮಾಡಲೇ ಬೇಕಾದ ಅನಿವಾರ್ಯತೆ ಉಂಟಾಯಿತು. ಶಸ್ತ್ರಚಿಕಿತ್ಸೆ ಗೆ ಸುಮಾರು ಅಂದಾಜು 8 ಲಕ್ಷ ರೂಪಾಯಿ ವೆಚ್ಚವಾಗಬಹುದು ಎಂದು ಅಲ್ಲಿನ ವೈದ್ಯರು ಮಾಹಿತಿ ನೀಡಿದರು.

ತಕ್ಷಣ ಅಣ್ಣಪ್ಪ ರವರ ಸಹೋದರ ಮಣಿಕಂಣ ಅವರು, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ಕುಂಡಚ್ಚಿರ ಮಂಜು ದೇವಯ್ಯ ಹಾಗೂ ಸ್ಥಳಿಯ ಕಾಂಗ್ರೆಸ್ ಮುಖಂಡರಿಗೆ ಮಾಹಿತಿ ನೀಡಿ, ಶಾಸಕ ಪೊನ್ನಣ್ಣ ಅವರ ಮೊರೆ ಹೋಗಿದರು. ತಕ್ಷಣವೇ ಆಸ್ಪತ್ರೆಯ ಉನ್ನತ ಅಧಿಕಾರಿಗಳ ಜೊತೆ ಮಾತನಾಡಿ ಶಸ್ತ್ರಚಿಕಿತ್ಸೆ ಮಾಡುವಂತೆ ಶಾಸಕರು ಸೂಚಿಸಿದ್ದಾರೆ. ಶಸ್ತ್ರಚಿಕಿತ್ಸೆಗೆ ಬೇಕಾದ ಹಣವನ್ನು ಆಯುಶ್ಮಾನ್ ಭಾರತ, ಆರೋಗ್ಯ ಕರ್ನಾಟಕ ಯೋಜನೆಯ ಮುಖಾಂತರ ಹಣವನ್ನು ಪಾವತಿ ಮಾಡಲು ತಿಳಿಸಿದರು. ಶಾಸಕರ ಸೂಚನೆಯಂತೆ ಸಾಮಾಜಿಕ ಕಾರ್ಯಕರ್ತರಾದ ಚೋಕಂಡ ಸಂಜು ಸುಬ್ಬಯ್ಯ ಅವರಿಗೆ ಈ ಚಿಕಿತ್ಸೆ ಯ ಸಂಪೂರ್ಣ ಜವಾಬ್ದಾರಿ ನೀಡಿದರು.

ಸಂಜು ಸುಬ್ಬಯ್ಯ ಅವರು ಅಣ್ಣಪ್ಪ ಅವರ ಶಸ್ತ್ರಚಿಕಿತ್ಸೆಯಾಗಿ ಅವರನ್ನು ಮರಳಿ ಕರೆದುಕೊಂಡು ಬರುವವರೆಗೂ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು. ಅಣ್ಣಪ್ಪ ಅವರನ್ನು ತನ್ನ ಮನೆಗೆ ಸೇರಿಸುವಲ್ಲಿ ಯಶಸ್ವಿಯಾದರು. ಇಂದು ಅಣ್ಣಪ್ಪ ಕುಟುಂಬದ ಎಲ್ಲಾ ಸದಸ್ಯರು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ವಿರಾಜಪೇಟೆ ನಿವಾಸಕ್ಕೆ ಆಗಮಿಸಿ ಕೃತಜ್ಞತೆ ಸಲ್ಲಿಸಿದರು. ಅಣ್ಣಪ್ಪ ಅವರ ಕುಟುಂಬಕ್ಕೆ ಧೈರ್ಯ ತುಂಬಿದ ಶಾಸಕರು ಅಣ್ಣಪ್ಪ ಅವರ ಐದು ತಿಂಗಳ ಮಗು ವನ್ನು ಎತ್ತಿಕೊಂಡು ಮುದ್ದಿಸಿ ವಯುಕ್ತಿಕ ಧನಸಹಾಯ ನೀಡಿದರು. ಈ ಸಂದರ್ಭದಲ್ಲಿ ಅಣ್ಣಪ್ಪ ಅವರ ಪತ್ನಿ ಹಾಗೂ ಚೆನ್ನಯನ ಕೋಟೆಯ ಕಾಂಗ್ರೆಸ್ ಕಾರ್ಯಕರ್ತರಾದ ಮನು,ರವೀಂದ್ರ ಬಾವೆ,ಪ್ರಕಾಶ್,ಪುರಸಭೆ ಉಪಾಧ್ಯಕ್ಷೆ ಫಸಿಯಾ ತಬ್ಸುಂ, ವಿರಾಜಪೇಟೆ ವಿಧಾನಸಭೆ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರು ಪಟ್ಟಡ ರಕ್ಷಿತ್ ಚಂಗಪ್ಪ, ಹಲವಾರು ಮಂದಿ ಭಾಗವಹಿಸಿದ್ದರು.