ಶಾಸಕ ಎಎಸ್ ಪೊನ್ನಣ್ಣ ಅವರ 52ನೇ ವರ್ಷದ ಹುಟ್ಟು ಹಬ್ಬ ಆಚರಣೆ
ಮಡಿಕೇರಿ;ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣರವರು ತಮ್ಮ ಜನ್ಮದಿನವನ್ನು ಇಂದು ಅತ್ಯಂತ ಅರ್ಥವತ್ತಾಗಿ ಆಚರಿಸಿಕೊಂಡರು. ಮೊದಲಿಗೆ ಭಗಂಡೇಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ತಲಕಾವೇರಿಗೆ ತೆರಳಿದ ಮಾನ್ಯ ಶಾಸಕರು ಅಲ್ಲಿ ತಾಯಿ ಕಾವೇರಿಗೆ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಭಾಗಮಂಡಲದ ಅಟಲ್ ವಸತಿ ಶಾಲೆಯ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ತಮ್ಮ ಜನ್ಮದಿನವನ್ನು ಆಚರಿಸಿದ ಮಾನ್ಯ ಶಾಸಕರು ಮಕ್ಕಳಿಗೆ ಹಿತವಚನ ಬೋಧಿಸಿದರು. ಬಳಿಕ ಭಾಗಮಂಡಲ ಹಾಗೂ ಕುಂದಚೆರಿಯಲ್ಲಿ ನಿರ್ಮಾಣವಾದ ರಸ್ತೆಯನ್ನು ಲೋಕಾರ್ಪಣೆಗೊಳಿಸಿದ ಮಾನ್ಯ ಶಾಕರು ಶುಭ ಕೋರಿದರು.
ಬಳಿಕ ಗೋಣಿಕೊಪ್ಪಲುವಿನಲ್ಲಿ ಕೊಳ್ಳಿಮಾಡ ಸಿ ಕರುಂಬಯ್ಯರವರ ಹೆಸರಲ್ಲಿ ನೂತನವಾಗಿ ನಿರ್ಮಾಣವಾದ ಸಾರ್ವಜನಿಕ ಬಸ್ ತಂಗುಧಾಣವನ್ನು ಲೋಕಾರ್ಪಣೆ ಗೊಳಿಸಿದ ಮಾನ್ಯ ಶಾಸಕರು, ಇದೇ ಸಂದರ್ಭದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಪಂದ್ಯಂಡ ಬೆಳ್ಳಿಯಪ್ಪರವರ ಪುತ್ತಳಿಯನ್ನು ಅನಾವರಣ ಗೊಳಿಸಿದರು. ಇದೇ ಸಂದರ್ಭದಲ್ಲಿ, ಹಕ್ಕು ಪತ್ರ ವಂಚಿತ ಗೋಣಿಕೊಪ್ಪ ಭಾಗದ ನೂರಾರು ನಿವಾಸಿಗಳಿಗೆ, ಶಾಸಕರು ಹಕ್ಕು ಪತ್ರವನ್ನು ವಿಚರಿಸಿದರು .
ಅಲ್ಲಿಂದ ಪೊನ್ನಂಪೇಟೆಯ ನೂತನ ಬಸ್ ನಿಲ್ದಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಮಾನ್ಯ ಶಾಸಕರು, ಪೊನ್ನಂಪೇಟೆ ಪ್ರಮುಖರು ನೀಡಿದ ಜನ್ಮದಿನದ ಶುಭಾಶಯಗಳನ್ನು ಸ್ವೀಕರಿಸಿದರು. ಬಳಿಕ ವಿರಾಜಪೇಟೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಶಾಸಕರ ಜನ್ಮದಿನ ಪ್ರಯುಕ್ತ ಆಯೋಜಿಸಿದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿದ ಮಾನ್ಯ ಶಾಸಕರು ಅಲ್ಲಿಂದ ನೇರವಾಗಿ, ಹೆಗ್ಗಳ ಗ್ರಾಮದಲ್ಲಿರುವ ವೃದ್ಧಾಶ್ರಮಕ್ಕೆ ತೆರಳಿ, ಅಲ್ಲಿಯ ನಿವಾಸಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ತಮ್ಮ ಜನ್ಮದಿನವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಅಲ್ಲಿಯ ನಿವಾಸಿಗಳ ಬೇಡಿಕೆಯಂತೆ ಅವರಿಗೆ ಫ್ಯಾನ್, ಟೇಬಲ್ ಹಾಗೂ ಟಿವಿಯನ್ನು ತನ್ನ ಸ್ವಂತ ವೆಚ್ಚದಲ್ಲಿ ನೀಡುವುದಾಗಿ ತಿಳಿಸಿದರು.
ಮಾನ್ಯ ಶಾಸಕರೊಂದಿಗೆ ಅವರ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ, ಹಾಗೂ ಪುತ್ರಿಯರು, ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಶಾಸಕರ ಜೇಷ್ಠ ಸಹೋದರ ನರೇನ್ ಕಾರ್ಯಪ್ಪ, ಬ್ಲಾಕ್ ಕಾಂಗ್ರೆಸ್ ಮಿದೇರಿರ ನವೀನ್, ವಿರಾಜಪೇಟೆ ಬ್ಲಾಕ್ ಅಧ್ಯಕ್ಷರು ಪಟ್ಟಡ ರಂಜಿ ಪೂಣಚ್ಚ, ನಾಪೋಕ್ಲು ಬ್ಲಾಕ್ ಕಾರ್ಯಧ್ಯಕ್ಷರಾದ ಸೌಕಾತ್ ಆಲೀ, ಎಲ್ಲಾ ಘಟಕದ ಅಧ್ಯಕ್ಷರುಗಳು, ವಲಯ ಅಧ್ಯಕ್ಷರುಗಳು, ಬೂತ್ ಅಧ್ಯಕ್ಷರುಗಳು ಮುಂಚೂಣಿ ಘಟಕಗಳ ಅಧ್ಯಕ್ಷರುಗಳು, ಪಕ್ಷದ ಎಲ್ಲಾ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0

