ಮಳೆ ನಿಂತ ಕೂಡಲೇ ರಸ್ತೆ ದುರಸ್ಥಿ ಚುರುಕುಗೊಳಿಸಲು ಶಾಸಕ‌ ಡಾ.ಮಂತರ್ ಗೌಡ ಸೂಚನೆ

ಮಳೆ ನಿಂತ ಕೂಡಲೇ ರಸ್ತೆ ದುರಸ್ಥಿ ಚುರುಕುಗೊಳಿಸಲು ಶಾಸಕ‌ ಡಾ.ಮಂತರ್ ಗೌಡ ಸೂಚನೆ

ಮಡಿಕೇರಿ:ಲೋಕೋಪಯೋಗಿ, ಪಂಚಾಯತ್ ರಾಜ್ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಮಡಿಕೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ದುರಸ್ಥಿಗೊಳಲಾಗಿರುವ ರಸ್ತೆಗಳ ಸಂಪೂಣ೯ ಪಟ್ಟಿ ಸಿದ್ದಪಡಿಸಿಟ್ಟುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಮಳೆ ನಿಂತ ಕೂಡಲೇ ವಿಳಂಭರಹಿತವಾಗಿ ರಸ್ತೆ ದುರಸ್ಥಿಯನ್ನು ಸಮಾರೋಪಾದಿಯಲ್ಲಿ ಕೈಗೊಳ್ಳುವಂತೆ ಡಾ.ಮಂತರ್ ಗೌಡ ಕರೆ ನೀಡಿದ್ದು, ಕಾಮಗಾರಿ ಗುಣಮಟ್ಟವಿಲ್ಲದೇ ಹೋದಲ್ಲಿ ಸಂಬಂಧಿಸಿದ ಗುತ್ತಿಗೆದಾರರನ್ನೇ ಹೊಣೆಯಾಗಿಸುವಂತೆ ಶಾಸಕ ಡಾ.ಮಂತರ್ ಕಟ್ಟು ನಿಟ್ಟಿನ ಆದೇಶ ನೀಡಿದ್ದಾರೆ. ಮಳೆ ಬಿಡುವು ನೀಡುತ್ತಿಲ್ಲವಾದ್ದರಿಂದ ರಸ್ತೆ ಚರಂಡಿ,ಹೆದ್ದಾರಿ ದುರಸ್ಥಿ ಕಾಮಗಾರಿ ವಿಳಂಭವಾಗುತ್ತಿರುವ ಬಗ್ಗೆ ಸಂಬಂಧಿಸಿದ ಇಲಾಖಾಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.