ನಿರ್ಮಾಣ ಹಂತದಲ್ಲಿರುವ ಅವಂದೂರು ಶ್ರೀ ಕೃಷ್ಣ ದೇವಸ್ಥಾನಕ್ಕೆ ಶಾಸಕರಿಂದ ವೈಯಕ್ತಿಕ ಧನ ಸಹಾಯ
admincoorgdaily

ಮಡಿಕೇರಿ: ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲೂಕು ಮದೆ ಗ್ರಾಮದ ಅವಂದೂರು ಭಾಗಕ್ಕೆ ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿದರು. ಅವಂದುೂರಿನ ಪುರಾತನ ಹಾಗೂ ಪ್ರಸಿದ್ಧ ಶ್ರೀ ಕೃಷ್ಣ ದೇವಾಲಯ ಪುನರ್ ನಿರ್ಮಾಣಗೊಳ್ಳುತ್ತಿದ್ದು ಈ ದೇವಾಲಯಕ್ಕೆ ಭೇಟಿ ನೀಡಿದ ಶಾಸಕರು ನಿರ್ಮಾಣ ಕಾಮಗಾರಿಗಳನ್ನು ವೀಕ್ಷಿಸಿದರು.
ಬಳಿಕ ದೇವಸ್ಥಾನ ಸಮಿತಿಯವರ ಸನ್ಮಾನ ಸ್ವೀಕರಿಸಿದ ಮಾನ್ಯ ಶಾಸಕರು ತಮ್ಮ ವೈಯುಕ್ತಿಕ ಧನಸಹಾಯವಾಗಿ ₹ 1 ಲಕ್ಷದ ಕೊಡುಗೆಯನ್ನು ನೀಡಿದರು. ಬಳಿಕ ದೇವಸ್ಥಾನದವರ ಮನವಿಗೆ ಸ್ಪಂದಿಸಿದ ಮಾನ್ಯ ಶಾಸಕರು, ಸರಕಾರದ ಕಡೆಯಿಂದ ದೇವಸ್ಥಾನ ಅಭಿವೃದ್ಧಿಗೆ ಸಾಧ್ಯವಾದಷ್ಟು ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ಪ್ರಮುಖರಾದ ಕೊಲ್ಯದ ಗಿರಿಶ್, ಬಗರ್ ಹುಕುಂ ಸದಸ್ಯರಾದ ಕೇಟೋಳಿ ಮೋಹನ್ ರಾಜ್, ಪಟ್ಟಡ ದೀಪಕ್, ಕಾವೇರಮ್ಮನ ಕುಮಾರ್, ಸೂರಜ್ ಹೊಸೂರು ಮೊದಲಾದವರು ಉಪಸ್ಥಿತರಿದ್ದರು.