ಮಡಿಕೇರಿ : ನಿವೃತ್ತ ಶಿಕ್ಷಣಾಧಿಕಾರಿ ಮಹಾದೇವಸ್ವಾಮಿ ಅವರಿಗೆ ಆತ್ಮೀಯ ಬೀಳ್ಕೊಡುಗೆ: ಸರ್ಕಾರಿ ಸೇವೆಯು ಪ್ರಾಮಾಣಿಕತೆ, ನೌಕರರ ವೃತ್ತಿಗೆ ಗೌರವ: ರಘುನಾಥ್
ಮಡಿಕೇರಿ: ಮಡಿಕೇರಿ ನಗರದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಆಡಳಿತ ) ರ ಕಛೇರಿಯಲ್ಲಿ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಆಗಸ್ಟ್ 31 ಕ್ಕೆ ಸೇವಾ ನಿವೃತ್ತಿ ಹೊಂದಿದ ಎಂ. ಮಹಾದೇವಸ್ವಾಮಿ ಅವರನ್ನು ಶಿಕ್ಷಣ ಇಲಾಖೆಯ ವತಿಯಿಂದ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಡಿಡಿಪಿಐ ಕಛೇರಿಯಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನಿರ್ಗಮಿತ ಡಿಡಿಪಿಐ ಸಿ.ರಂಗಧಾಮಪ್ಪ ಅವರು ಕಛೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಡಿಡಿಪಿಐ ಸಿ.ರಂಗಧಾಮಪ್ಪ ಮಾತನಾಡಿ, ಶಿಕ್ಷಣ ಇಲಾಖೆಯ ಸೇವೆಯು ಅನನ್ಯವಾದ ಸೇವೆ. ಇದನ್ನು ಶ್ರದ್ಧೆ, ಪ್ರಾಮಾಣಿಕತೆಯಿಂದ ನಿರ್ವಹಿಸುವ ಮೂಲಕ ಎಲ್ಲರೂ ಇಲಾಖೆಯ ಘನತೆಯನ್ನು ಹೆಚ್ಚಿಸಬೇಕು ಎಂದರು. ಜಿಲ್ಲೆಯಲ್ಲಿ ಈ ಹಿಂದಿನ ಎರಡು ವರ್ಷಗಳಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಕೊಡಗು ಜಿಲ್ಲೆಯು 4 ನೇ ಸ್ಥಾನ ಗಳಿಸಿದೆ. ಇದಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಜಿಲ್ಲಾ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಮಹಾದೇವಸ್ವಾಮಿ ಅವರ ವಿಶೇಷ ಕಾಳಜಿ ಮತ್ತು ಅಧಿಕಾರಿಗಳ ಕಾರ್ಯಕ್ಷಮತೆ ಹಾಗೂ ಪ್ರೌಢಶಾಲಾ ಶಿಕ್ಷಕರಉ ವಹಿಸಿದ ವಿಶೇಷ ಶ್ರಮ ಎಂದು ಶ್ಲಾಘಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತಗೊಂಡ ಶಿಕ್ಷಣಾಧಿಕಾರಿ ಎಂ.ಮಹಾದೇವಸ್ವಾಮಿ, ತಾವು ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ನೋಡಲ್ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಎರಡು ಅವಧಿಯಲ್ಲೂ ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವು ರಾಜ್ಯಕ್ಕೆ 4 ನೇ ಸ್ಥಾನ ಗಳಿಸಿದ್ದು ಸಂತಸ ತಂದಿದೆ ಎಂದರು. ತಮಗೆ ಈ ಜಿಲ್ಲೆಯಲ್ಲಿ ಇಲಾಖೆ ಮತ್ತು ಶಿಕ್ಷಕರು ನೀಡಿದ ಪ್ರೀತಿ- ವಿಶ್ವಾಸಕ್ಕೆ ಚಿರ ಋಣಿಯಾಗಿದ್ದೇನೆ ಎಂದರು. ಜಿಲ್ಲಾ ಖಜಾನ ಇಲಾಖೆಯ ಉಪ ನಿರ್ದೇಶಕ ಬಿ.ಎನ್. ರಘುನಾಥ್ ಮಾತನಾಡಿ, ಸರ್ಕಾರಿ ಸೇವೆಯಲ್ಲಿ ನೌಕರರ ಪ್ರಾಮಾಣಿಕ ಸೇವೆ ಮತ್ತು ಕರ್ತವ್ಯವು ನೌಕರ ವೃತ್ತಿಯನ್ನು ಗೌರವಿಸುತ್ತದೆ. ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಮಹಾದೇವಸ್ವಾಮಿ ಅವರು ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಎಲ್ಲಾ ಸಿಬ್ಬಂದಿ ಮತ್ತು ಶಿಕ್ಷಕರ ಜತೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.
ಜಿಲ್ಲಾ ಅಪರ ಜಿಲ್ಲಾಧಿಕಾರಿ ಐಶ್ವರ್ಯ ಅವರು ಮಹಾದೇವಸ್ವಾಮಿ ಅವರನ್ನು ಅಭಿನಂದಿಸಿ ನಿವೃತ್ತಿ ಜೀವನಕ್ಕೆ ಶುಭ ಕೋರಿದರು. ಡಿವೈಪಿಸಿಗಳಾದ ಎಂ.ಕೃಷ್ಣಪ್ಪ, ಸೌಮ್ಯ ಪೊನ್ನಪ್ಪ, ಅಕ್ಷರ ದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ಹೇಮಂತ್ ರಾಜ್, ಮಡಿಕೇರಿ ನಗರಸಭೆಯ ಅಧ್ಯಕ್ಷೆ ಕಲಾವತಿ, ಬಿಇಓಗಳಾದ ಎಂ.ಕೃಷ್ಣಪ್ಪ, ಟಿ.ಜೆ.ಆನಂದ, ಜಿ.ಬಿ.ರಾಮಪ್ಪ, ರವಿ ಪ್ರಸನ್ನ, ನಿವೃತ್ತ ಬಿಇಓ ಬಿ.ಕೆ.ಶಿವಣ್ಣ, ಕೊಳ್ಳೇಗಾಲ ನಗರಸಭಾ ಸದಸ್ಯ ಬಿ ಗೋಪಾಲ, ಜಿಲ್ಲಾ ಶಿಕ್ಷಣಾಧಿಕಾರಿ ಡಾ ಸದಾಶಿವಯ್ಯ ಎಸ್.ಪಲ್ಲೇದ್, ಕಛೇರಿಯ ಪತ್ರಾಂಕಿತ ಅಧಿಕಾರಿ ಪಿ.ಎಸ್. ನಟರಾಜ್, ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ಕೆ.ಪಿ.ಗುರುರಾಜ್, ಶಿಕ್ಷಕರ ಸಂಘಟನೆಯ ಪ್ರಮುಖರಾದ ಎಂ.ಎಸ್.ಮಹೇಂದ್ರ, ಎಸ್.ನಾಗರಾಜ್, ಕಛೇರಿಯ ಅಧಿಕಾರಿ ವರ್ಗ ಮತ್ತು ಸಿಬ್ಬಂದಿ ಹಾಜರಿದ್ದರು.
ನಿವೃತ್ತಿಗೊಂಡ ಶಿಕ್ಷಣಾಧಿಕಾರಿ ಮಹಾದೇವಸ್ವಾಮಿ ಮತ್ತು ಅವರ ಪತ್ನಿ ಲೀಲಾಂಭ ಅವರನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ಹೂಗುಚ್ಛ ನೀಡಿ ಅಭಿನಂದಿಸಿ ಸನ್ಮಾನಿಸಿ ಬೀಳ್ಕೊಟ್ಟರು. ಬಿಳಿಕೆರೆ ಪ್ರೌಢಶಾಲೆಯ ಶಿಕ್ಷಕರಾದ. ಪುಷ್ಪ, ನಿರ್ಮಲ, ಸಲೀಲಾ ಹೆಗಡೆ ಹಾಗೂ ಕೊಳ್ಳೇಗಾಲದ ಮುತ್ತುರಾಜ್ , , ಚಂದ್ರು ಅಶೋಕ ,ವಸಂತ, ಡಿಡಿಪಿಐ ಕಛೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಸೇರಿದಂತೆ ಪಡುವಲಹಿಪ್ಪೆ ಸರ್ಕಾರಿ ಹಿರಿಯ ವಿದ್ಯಾರ್ಥಿಗಳು, ಇನ್ನಿತರರು ಇದ್ದರು. ಇದಕ್ಕೂ ಮುನ್ನ ಕೂಡಿಗೆ ಡಯಟ್ ಪ್ರಾಂಶುಪಾಲರಾದ ಡಿ.ಉದಯ್ ಕುಮಾರ್ ಅವರು ಮಹಾದೇವಸ್ವಾಮಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.