ಮಡಿಕೇರಿ; ಜನಿಸುವ ಮೊದಲೇ ಉಸಿರು ಚೆಲ್ಲಿದ ಶಿಶು;ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಸಾವು

Jan 24, 2026 - 10:40
 0  2k
ಮಡಿಕೇರಿ; ಜನಿಸುವ ಮೊದಲೇ ಉಸಿರು ಚೆಲ್ಲಿದ ಶಿಶು;ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಸಾವು
Photo credit:istock (baby)

ಮಡಿಕೇರಿ;ಜನಿಸುವ ಮೊದಲೇ ಉಸಿರು ನಿಲ್ಲಿಸಿದ ಶಿಶು. ಮಡಿಕೇರಿ ಮಹಿಳಾ ಮತ್ತು ಮಕ್ಕಳ‌ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ವೈದ್ಯರ ನಿರ್ಲಕ್ಷ್ಯ ದಿಂದಲೇ‌ ಮಗು ಸಾವು ಎಂದು ಪೋಷಕರ ಆರೋಪಿಸಿದ್ದಾರೆ.

 ಜ.20 ರಂದು ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಗೆ ತೋರಿಸಿದ್ದ ತಾಯಿ ಸರೋಜಾ ಅವರು, ಮಗು ಅಪಾಯದಲ್ಲಿದ್ದು ತಕ್ಷಣ ಮಡಿಕೇರಿ ಆಸ್ಪತ್ರೆಗೆ ತೆರಳುವಂತೆ ಗೋಣಿಕೊಪ್ಪಲು ವೈದ್ಯೆ ಡಾ ಗ್ರೀಷ್ಮಾ ಅವರು ಸೂಚನೆ ನೀಡಿದ್ದರು. ಅದೇದಿನ ಸಂಜೆ 7 ಗಂಟೆಗೆ ಮಡಿಕೇರಿ ಆಸ್ಪತ್ರೆ ಗರ್ಭಿಣಿ ಸರೋಜಾ ದಾಖಲಾಗಿದ್ದರು.

 ತುರ್ತು ಪರಿಸ್ಥಿತಿ ಇದ್ದರೂ ಮಡಿಕೇರಿ ಆಸ್ಪತ್ರೆ ವೈದ್ಯರಿಂದ ಗರ್ಭಿಣಿಯ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ. ರಾತ್ರಿ ಪಾಳಿಯಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿನಿಯಿಂದಲೇ ಪರೀಕ್ಷೆ ನಡೆದಿದ್ದು, ಅಂದು ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಡಾ ಮಮತಾ, ರಾತ್ರಿ ಪಾಳಿಯಲ್ಲಿದ್ದರೂ ಡಾ ಮಮತಾ ಗರ್ಭಿಣಿಯನ್ನು ಪರೀಕ್ಷಿಸದೆ ನಿರ್ಲಕ್ಷ್ಯಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮರುದಿನ ಬೆಳಗ್ಗೆ ಆಗಮಿಸಿ ಪರೀಕ್ಷಿಸಿದ ಡಾ ಮಮತಾ, ಈ ಸಂದರ್ಭ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ ಬಳಿಕ ಹೆರಿಗೆ ಮಾಡಿಸಿ ಹೆಣ್ಣು ಮಗು ಹೊರ ತೆಗೆದಿದ್ದಾರೆ. ವೈದ್ಯರು, ಆಸ್ಪತ್ರೆ ಸಿಬ್ಬಂದಿ ವಿರುದ್ಧ ಗರ್ಭಿಣಿ ಸಂಬಂಧಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಆಸ್ಪತ್ರೆಗೆ ಹಿರಿಯ ವೈದ್ಯ ಡಾ ಸೋಮಶೇಖರ್, ಡಾ ನಂಜುಂಡ ಭೇಟಿ ನೀಡಿದ್ದು, ಪ್ರಕರಣದ ವಿಚಾರಣೆ ನಡೆಸಿ ವೈದ್ಯರ ವಿರುದ್ದ ಕ್ರಮದ ಭರವಸೆ ನೀಡಿದ್ದಾರೆ. ಬಾಳೆಲೆ‌ ಮೂಲದ ಗರ್ಭಿಣಿ ಬಾಳೆರ ಸರೋಜಾ,ಅವರ ಮುದ್ದಾದ ಹೆಣ್ಣು ಮಗು ಕಳೆದುಕೊಂಡು ಪೋಷಕರ‌ ರೋಧನ ಮುಗಿಲು ಮುಟ್ಟಿದೆ ಹೆಣ್ಣು ಮಗುವೇ ಆಗಲೆಂದು ಪೋಷಕರು ಹರಕೆ ಹೊತ್ತಿದ್ದರು. ತಪ್ಪಿತಸ್ಥ ವೈದ್ಯರ ವಿರುದ್ಧ ಕ್ರಮಕ್ಕೆ ಪೋಷಕರ ಆಗ್ರಹಿಸಿಧದು, ಶಾಸಕ ಡಾ‌. ಮಂಥರ್‌ಗೌಡ, ಮುಖ್ಯಮಂತ್ರಿಗಳ‌ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣಗೆ ದೂರು ನೀಡುವುದಾಗಿ ಹೇಳಿಕೆ ನೀಡಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 8
Sad Sad 9
Wow Wow 0