ಮಡಿಕೇರಿ ದಸರಾ ಜನೋತ್ಸವಕ್ಕೆ ನಗರದ ನಾಗರಿಕರ ಸಹಕಾರ ಅಗತ್ಯ:ಮಹೇಶ್ ಜೈನಿ

ಮಡಿಕೇರಿ ದಸರಾ ಜನೋತ್ಸವಕ್ಕೆ ನಗರದ ನಾಗರಿಕರ ಸಹಕಾರ ಅಗತ್ಯ:ಮಹೇಶ್ ಜೈನಿ

ಮಡಿಕೇರಿ: ಮಡಿಕೇರಿ ದಸರಾ ಜನೋತ್ಸವಕ್ಕೆ ನಗರದ ನಾಗರಿಕರ ಸಹಕಾರ ಅಗತ್ಯವಾಗಿದ್ದು, ಶಾಸಕರ ಮಾರ್ಗದರ್ಶನದಲ್ಲಿ ವ್ಯವಸ್ಥಿತವಾಗಿ ದಸರಾ ಆಚರಣೆಗೆ ದಸರಾ ಸಮಿತಿ ಸಿದ್ಧತೆ ಮಾಡಲಾಗುತ್ತಿದೆ ಎಂದು ನಗರ ದಸರಾ ಸಮಿತಿ ಮತ್ತು ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ ತಿಳಿಸಿದರು.

ಅ.೧ರಂದು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಆಯುಧ ಪೂಜೆ ಸಭಾಕಾರ್ಯಕ್ರಮ ನಡೆಯಲಿದೆ. ಅಂದಿನ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರನ್ನು ಆಹ್ವಾನಿಸಲಾಗಿದೆ. ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ರಘು ದೀಕ್ಷಿತ್ ಆಗಮಿಸಲಿದ್ದಾರೆ.

ವಿಜಯದಶಮಿಯಂದು ಬೆಳಗ್ಗಿನವರೆಗೆ ಪ್ರೇಕ್ಷಕರನ್ನು ರಂಜಿಸಲು ದಕ್ಷಿಣ ಕನ್ನಡ ಜಿಲ್ಲೆಯ ಶೇಡ್ಸ್ ತಂಡದಿಂದ ವಿವಿಧ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ದಸರಾ ಹಿನ್ನೆಲೆ ನಗರದ ಮುಖ್ಯಬೀದಿಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ, ವೇದಿಕೆ ನಿರ್ಮಾಣ, ಡ್ರೋನ್, ಗ್ಯಾಲರಿ ನಿರ್ಮಾಣ ಒಟ್ಟು ೫೮ ಲಕ್ಷ ವೆಚ್ಚದಲ್ಲಿ ಮಾಡಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಮತ್ತು ನಗರ ದಸರಾ ಸಮಿತಿ ಅಧ್ಯಕ್ಷೆ ಕಲಾವತಿ, ನಗರ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಕಾರ್ಯದರ್ಶಿ ಕಾನೇಹಿತ್ಲು ಮೊಣ್ಣಪ್ಪ, ಖಜಾಂಚಿ ಸಬಿತಾ ಇದ್ದರು.