Kodagu

ಮಡಿಕೇರಿ:ವಿಶ್ವ ಮಾನವ ಉದ್ಯಾನವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

admincoorgdaily

ಮಡಿಕೇರಿ:ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಡಿಕೇರಿ ನಗರದ ವಿಶ್ವಮಾನವ ಉದ್ಯಾನವನದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಸಮಾಜ ಸೇವಕರಾದ ಪ್ರಭು ರೈ ಹಾಗೂ ಖಲೀಲ್ ಭಾಷಾ ರವರು ಕುವೆಂಪು ಪುತ್ತಳಿಗೆ ಮಾಲಾರ್ಪಣೆ ಮಾಡಿದರು ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷರಾದ ಅಂಬೆಕಲ್ ನವೀನ್ ಕುಶಾಲಪ್ಪ ರವರು ಧ್ವಜಾರೋಹಣ ನೆರವೇರಿಸಿದರು.ಸಮಾಜ ಸೇವಕರು ಹಾಗೂ ಪುರಸಭಾ ಮಾಜಿ ಉಪಾಧ್ಯಕ್ಷ ಟಿಎಂ ಅಯ್ಯಪ್ಪರವರು ರಾಜ್ಯೋತ್ಸವದ ಶುಭಾಶಯ ಕೋರಿ ರಾಜ್ಯೋತ್ಸವದ ಕುರಿತು ಹಿತನುಡಿಗಳನಾಡಿದ್ದರು.

ಕಾರ್ಯಕ್ರಮದಲ್ಲಿ ವೇದಿಕೆಯ ಅಧ್ಯಕ್ಷರು ರವಿ ಗೌಡ ತಾಲೂಕು ಉಪಾಧ್ಯಕ್ಷರಾದ ನಾಗೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಅಕ್ಷಿತ್,ಮುರ್ನಾಡು ವಲಯ ಅಧ್ಯಕ್ಷರಾದ ವಸಂತ್, ನಗರ ಉಪಾಧ್ಯಕ್ಷರಾದ ಲಿಲ್ಲಿಗೌಡ, ವೇದಿಕೆಯ ಸದಸ್ಯರುಗಳಾದ ಪುನೀತ್ ಜಿ.ಎನ್. ಹರ್ಷಿತ್, ಅಜಿತ್, ಅನಂತ್,ರೂಪ,ಸೈಮನ್, ಲಿಖಿತ್, ಮಹದೇವಣ್ಣ,ವಸಂತ್ ಭಟ್, ಶೇಕ್ ಆದಂ,ಲಿಖಿತ್.ಹೆಚ್. ವಿ ರಮೇಶ್ ಭಾಗಮಂಡಲ ರವರುಗಳು ಹಾಜರಿದ್ದರು ಕಾರ್ಯಕ್ರಮದ ಕೊನೆಯಲ್ಲಿ ವೇದಿಕೆಯ ವತಿಯಿಂದ ನೆರೆದಿದ್ದವರಿಗೆ ಹಾಗೂ ಸಾರ್ವಜನಿಕರಿಗೆ ಸಿಹಿ ವಿತರಣಿಸಲಾಯಿತು. ಕಾರ್ಯಕ್ರಮದಲ್ಲಿ ರವಿಗೌಡ ಅವರು ಸ್ವಾಗತಿಸಿ ಅಕ್ಷಿತ್ ಅವರು ವಂದಿಸಿದರು.